ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರೇಮಿಗಳ ಆತ್ಮಹತ್ಯೆ

Mainashree
Updated On : 17 May 2013, 11:04 am

ಕೊಪ್ಪ: ತಾಲೂಕಿನ ನಿಲುಗಳಿಯಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡು ಒಂದು ತಿಂಗಳಾದ ನಂತರ ಶವ ಗುರುವಾರ ಪತ್ತೆಯಾಗಿದೆ.
 ಮೃತರನ್ನು ನಿಲುಗುಳಿಯ ಸಂಪತ್ತು (30), ಮೆಗರವಳ್ಳಿಯ ಅನ್ಸೆ ಗ್ರಾಮದ ದಿವ್ಯಾ(22) ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರೀತಿಸುತ್ತಿದ್ದು ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಅದರೆ ಯುವಕನ ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕ ನೋರ್ವ ಕೊಟ್ಟಿಗೆ ದರಗು ತರಲೆಂದು ಗುಡ್ಡಕ್ಕೆ ತೆರಳಿದ ಸಂದರ್ಭದಲ್ಲಿ ಇಬ್ಬರು ನೇಣು ಹಾಕಿಕೊಂಡು ಕೊಳೆತ ಶವಗಳು ಕಂಡು ಬಂದ್ದರಿಂದ ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ ಅವರು ಸ್ಥಳ ಪರೀಶಿಲನೆ ಮಾಡಿದ ಸಂದರ್ಭದಲ್ಲಿ ಎರಡು ಮೊಬೈಲ್, ಬ್ಯಾಗ್, ಪರ್ಸ್ಸ್ ಸಿಕ್ಕಿದ್ದರಿಂದ  ಮೃತ ದೇಹಗಳ ವಿಳಾಸವನ್ನು ಗುರುತಿಸಲಾಗಿದೆ. ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement