ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಂಕರಾಚಾರ್ಯರ ಸಿದ್ಧಾಂತ ಇಂದಿಗೂ ಪ್ರಸ್ತುತ

Mainashree
Updated On : 17 May 2013, 11:05 am

ತರೀಕೆರೆ: ಶಂಕರಾಚಾರ್ಯರ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ ಎಂದು ನಿವೃತ್ತ ಉಪನ್ಯಾಸಕ ಬಿ.ಎಚ್. ಕುಮಾರಸ್ವಾಮಿ ತಿಳಿಸಿದ್ದಾರೆ.
ಅವರು, ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏರ್ಪಾಡಾಗಿದ್ದ ಶ್ರೀ ಶಂಕರ ಜಯಂತಿ ಸಮಾರೋಪ ಸಮಾರಂಭದಲ್ಲಿ
ಮಾತನಾಡುತ್ತಿದ್ದರು.
ಆದಿಗುರು: ಕೇವಲ ತಮ್ಮ 32 ವರ್ಷ ವಯಸ್ಸಿನಲ್ಲಿ ಸಮಗ್ರ ಭಾರತ ದೇಶವನ್ನು ಪರ್ಯಟನೆ ಮಾಡಿ ಅದ್ವೈತ ಸಿದ್ಧಾಂತವನ್ನು ಎಲ್ಲಡೆ ಪಸರಿಸಿ, ಅದ್ವೈತ ಸಿದ್ಧಾಂತವನ್ನು ಮೇಲಕ್ಕೆತ್ತಿದ ಆದಿಗುರು ಶಂಕರರ ಸಿದ್ಧ್ದಾಂತ ಎಲ್ಲ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದ ಅವರು ದೇಶದ ನಾಲ್ಕು ಕಡೆಗಳಲ್ಲಿ ಅದ್ವೈತ ಸಿದ್ದಾಂತ ಪ್ರಸಾರಕ್ಕಾಗಿಯೇ ನಾಲ್ಕು ಮಠಗಳನ್ನು ಸ್ಥಾಪಿಸಿ, ಭರತಖಂಡದ ಏಕತೆಯನ್ನು ಸಾಧಿಸುವುದರಲ್ಲಿ ಶ್ರೀ ಶಂಕರರು ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಬ್ರಾಹ್ಮಣ  ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀವತ್ಸ ಭಜನಾ ಮಂಡಳಿ ವತಿಯಿಂದ ಸೌಂದರ್ಯ ಲಹರಿ ಪಾರಾಯಣ ಹಾಗೂ ಶ್ರೀ ಶಂಕರಾಚಾರ್ಯ ವಿರಚಿತ ಭಜನೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement