ಸುದ್ದಿ ಸಂಕ್ಷೇಪ
ರುದ್ರೇಶ್ವರ ಶಾಲೆಗೆ ಶೇ.100 ಫಲಿತಾಂಶ
ತರೀಕೆರೆ: ಈ ಬಾರಿ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಮೀಪದ ಹಿರೇಕಾನವಂಗಲ ಶ್ರೀ ರುದ್ರೇಶ್ವರ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಕುಳಿತಿದ್ದ 64 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಅತ್ಯುನ್ನತ, 36 ಪ್ರಧಮ, 9 ದ್ವಿತೀಯ, 12 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದಾರೆ. ಶಾಲೆಯು ಸತತ 8ನೇ ಬಾರಿಗೆ ಶೇ.100 ರಷ್ಟು ಫಲಿತಾಂಶ ಪಡೆದಿದೆ.
ಸಿ.ವಿ. ಚೈತ್ರ 601 (ಶೇ.96.16), ಸಿ.ಪಿ. ಭೂಮಿಕ 572 (ಶೇ.91.52) ಎಚ್.ಸಿ. ರಚನ 568 (ಶೇ.90.88) ಎಸ್. ಅನುಷಾ 553 (ಶೇ.88,48) ಜೆ.ಎಂ. ಬಾರ್ಗೇಶ್ 550 (ಶೇ.88) ಎಸ್.ಸಿ. ಚೈತ್ರ 541 (ಶೇ.86.56) ಎಚ್.ಎಂ. ಪ್ರೀತಿ 532 (85.12) ಅಂಕ ಪಡೆದಿದ್ದಾರೆ.
ಸಿ.ವಿ. ಚೈತ್ರ ಅವರು ಕನ್ನಡ ಮಾಧ್ಯಮದಲ್ಲಿ 601 ಅಂಕ ಗಳಿಸಿ ತಾಲೂಕಿನಲ್ಲೇ ಪ್ರಧಮ ಸ್ಥಾನ ಪಡೆದಿದ್ದಾರೆ. ಶಾಲೆ ಸಂಸ್ಥೆಯವರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.