ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆತ್ತ ತಾಯಿಗೇ ಮುಕ್ತಿ ಕಾಣಿಸಿದ ಕುಡುಕ ಪುತ್ರ

Mainashree
Updated On : 17 May 2013, 11:04 am

ಮೂಡಿಗೆರೆ: ಪಾನಮತ್ತನಾದ ಮಗ ತಾಯಿಯನ್ನೇ ಕೊಂದು ನಂತರ ಆಕೆಯ ಶವವನ್ನು ಮನೆಯಲ್ಲಿಟ್ಟು ಮನೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ತಾಲೂಕಿನ ಕಳಸ ಹೋಬಳಿಯ ತನೋಡಿ ಗ್ರಾಮದ ಕಾಳಿಪಲ್ ಎಂಬಲ್ಲಿ ನಡೆದಿದೆ.
 ಮೃತಪಟ್ಟ ನತದೃಷ್ಟೆ ಕಾಳಿಪಲ್‌ನ ಸಣ್ಣಮ್ಮ(55) ತಾಯಿ ಸಾವಿಗೆ ಎರಡನೇ ಮಗ ಶೇಖರ(30)ಕಾರಣ ಎಂದು ಆರೋಪಿಸಲಾಗಿದೆ.
ಘಟನೆಯ ವಿವರ: ಬುಧವಾರದ ರಾತ್ರಿ ಕುಡಿದು  ಮನೆಗೆ ಬಂದ ಶೇಖರ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಪ್ರಾರಂಬಿಸಿ, ನಂತರ  ತಾಯಿಯನ್ನು ಕೊಂದು ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆ ಮತ್ತು ಆತನ ತಾಯಿಯ ಶವ ಸಂಪೂರ್ಣ ಸುಟ್ಟು ಹೋದ ಮೇಲೆ ತಡ ರಾತ್ರಿ ದೂರದ ಮನೆಯವರನ್ನು ಎಬ್ಬಿಸಿ ತನ್ನ ತಾಯಿ ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಬೆಳಗ್ಗೆ ಸುಟ್ಟುಕರಕಲಾದ ಶವವನ್ನು ನೋಡಿ ತಕ್ಷಣ ಕಳಸ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಕುದುರೇಮುಖ ವೃತ್ತ ನಿರೀಕ್ಷಕ ನಾಯ್ಕರ್, ಕಳಸ ಠಾಣಾಧಿಕಾರಿ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement