ವೈದ್ಯರ ಕೊರತೆ: ಚರ್ಚಿಸಿ ಕ್ರಮ
ಮೂಡಿಗೆರೆ: ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೂವರು ವೈದೈರು ವರ್ಗಾವಣೆಯಾಗಿದ್ದರಿಂದ ಶಾಸಕ ಬಿ.ಬಿ.ನಿಂಗಯ್ಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ವೈದ್ಯರ ಅವಹಾಲು ಆಲಿಸಿದರು.
ಈ ವೇಳೆ ಆಡಳಿತ ವೈದ್ಯಾಧಿಕಾರಿ ಹರೀಶ್‌ಬಾಬು ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇತ್ತೀಚೆಗೆ ಮೂವರು ವೈದ್ಯರು ವರ್ಗಾವಣೆಯಾಗಿ ರೋಗಿಗಳನ್ನು ಪರೀಕ್ಷೆ ಮಾಡಲು ತೀವ್ರ ತೊಂದರೆಯುಂಟಾಗುತ್ತಿದೆ. ಆದ್ದರಿಂದ ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.
ಬಳಿಕ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ರಾಜ್ಯದಲ್ಲಿಯೆ ವೈದ್ಯರ ಕೊರತೆ ಇದೆ. ಇಲ್ಲಿಯೂ ಮೂವರ ವೈದ್ಯರ ವರ್ಗಾವಣೆಯಿಂದ ರೋಗಿಗಳಿಗೆ ತೊಂದರೆಯುಂಟಾಗುತ್ತಿದೆ ಎಂಬುದು ತನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲಿಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಅವರು, ರೋಗಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ತಾಪಂ ಸದಸ್ಯ ಸುಭ್ರಾಯಗೌಡ, ಹೂವಮ್ಮ, ಲೋಹಿತ್ ಇದ್ದರು.