ಸುದ್ದಿ ಸಂಕ್ಷೇಪ
ಕೃತಜ್ಞತೆ ಸಲ್ಲಿಕೆ
ತರೀಕೆರೆ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತರೀಕೆರೆ ತಾಲೂಕು ಕಮ್ಯೂನಿಸ್ಟ್ ಪಕ್ಷದ ಎಐಟಿಯುಸಿಯ ಸಾಮೂಹಿಕ ಸಂಘಟನೆಗಳಾದ ಕಾಫಿ ತೋಟದ ಮಾಲೀಕರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ ಹಾಗೂ ಆಶಾ ಕಾರ್ಯಕರ್ತೆಯರು ಜಲ್ಲಾ ಸಮಿತಿಯ ಆದೇಶದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲುವಿಗೆ ಸಹಕಾರ ನೀಡಿರುವ ಎಲ್ಲಾ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರಿಗೆ ತಾಲೂಕು ಸಿಪಿಐ ಕಾರ್ಯದರ್ಶಿ ಹಾಗೂ ಎಐಟಿಯುಸಿ ಮುಖಂಡ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತ ವಿಕಾಸ ಪರಿಷತ್ಗೆ ಆಯ್ಕೆ
ಶೃಂಗೇರಿ: ಭಾರತ್ ವಿಕಾಸ್ ಪರಿಷತ್ ವಿದ್ಯಾಶಂಕರ ಶಾಖೆಯ ಅಧ್ಯಕ್ಷರಾಗಿ ಸತ್ಯನಾರಾಯಣ್ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ರವಿಕುಮಾರ್, ದಕ್ಷಿಣ ಪ್ರಾಂತೀಯ ಸಂಚಾಲಕರಾಗಿ ಶೃಂಗೇರಿ ಸುಬ್ಬಣ್ಣ, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಸುಜಾತ, ಸಹಕಾರ್ಯದರ್ಶಿಯಾಗಿ ಮುರಳೀಧರ ಪೈ, ಖಜಾಂಚಿಯಾಗಿ ನಾಗೇಂದ್ರ ರಾವ್ ಕಚ್ಚಿಗೆ, ರಾಷ್ಟ್ರೀಯ ಸ್ಪರ್ಧಾ ವಿಭಾಗದ ಸಂಚಾಲಕರಾಗಿ ಸುಬ್ರಮಣ್ಯಚಾರ್, ಉಮಾ ರಾಜಗೋಪಾಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.