ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ

Vishwanath S
Updated On : 19 May 2013, 1:19 am

ಚಿಕ್ಕಮಗಳೂರು, ಮೇ 18
ಕುಡಿಯುವ ನೀರು, ವಸತಿ ಯೋಜನೆ ಬಿಲ್ ಪಾವತಿ ಹಾಗೂ ಇತರೆ ಮೂಲಸೌಕರ್ಯ ಒದಗಿಸದೆ ದೀರ್ಘಕಾಲ ರಜೆ ಮೇಲಿರುವ ಪಿಡಿಒ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆಗಳಿಗೆ ಸ್ಪಂದಿಸದ ಗ್ರಾಪಂ ಅಧ್ಯಕ್ಷರು ರಾಜಿನಾಮೆ ನೀಡಬೇಕು ಎಂದು ಸ್ಥಳೀಯರು ಕೂದುವಳ್ಳಿ ಗ್ರಾಪಂ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
 ಗ್ರಾಮದ ಮುಖಂಡ ಮಣಿಪಾಲ್, ರಘು ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಗ್ರಾಪಂ ಕಚೇರಿ  ಮುಂದೆ ಸಮಾವೇಶಗೊಂಡು ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು. ಅಧ್ಯಕ್ಷರು ರಾಜಿನಾಮೆ ನೀಡಬೇಕು ಒತ್ತಾಯಿಸಿದರು.
ನೀರಿನ ಸಮಸ್ಯೆ: ಈ ಸಂದರ್ಭದಲ್ಲಿ ಮಾತನಾಡಿದ ಮುಂಖಡರು ಗ್ರಾಪಂ ವ್ಯಾಪ್ತಿಯ ಚಿತ್ರವಳ್ಳಿ, ಕೂದುವಳ್ಳಿ, ಗುಮ್ಮನ್ ಖಾನ್, ಮಹಜಿದ್ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನ ಪರಿತಪಿಸುವಂತಾಗಿದೆ. ಸಮಸ್ಯೆ ಪರಿಹರಿಸಬೇಕಾದ ಪಿಡಿಒ ದೀರ್ಘಕಾಲ ರಜೆ ಮೇಲಿದ್ದರೆ, ಕಾರ್ಯದರ್ಶಿ ಜನರ ಸಮಸ್ಯೆಗೆ ಸ್ಪಂದಿಸಲು ಪಿಡಿಒ ಕಡೆಗೆ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರಾಗಿರುವ ಫಲಾನುಭವಿಗಳು ಬಿಲ್ ತಡೆಯಲು ದಿನನಿತ್ಯ ಕಚೇರಿ ಬಳಿ ಕಾಯುತ್ತಿದ್ದು, ಅವರಿಗೆ ಕೂಲಿ ಕೊಡುವವರ್ಯಾರು ಎಂದು ಪ್ರಶ್ನಿಸಿದ ಮುಂಖಡರು ಪಿಡಿಒ ವರ್ಗಾವಣೆ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಭಾರಿ ಅಕ್ರಮ: ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಲ್ಲಿ ಅವ್ಯವಹಾರ ನಡೆಸಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಭಾರಿ ಆಕ್ರಮ ನಡೆದಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 ಗ್ರಾಮಸ್ಥರಾದ ದ್ಯಾವಚಾರ್, ರವಿಗೌಡ, ರೇವಣ್ಣಗೌಡ, ಮೇರಿ ಗೌನ್ನರೀಸ್, ಚಂದ್ರೇಗೌಡ, ಜೈಪ್ರಕಾಶ್ ನಾರಾಯಣ, ಹರೀಶ್, ಸುಂದ್ರೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement