ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಾರದಾಂಭೆ ದರ್ಶನ ಪಡೆದ ನ್ಯಾ. ನಾಗರತ್ನ

Vishwanath S
Updated On : 19 May 2013, 1:21 am

ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠಕ್ಕೆ ರಾಜ್ಯ ಹೈಕೋರ್ಟ್ ನ್ಯಾಯಾಧೀಶೆ ನಾಗರತ್ನ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ ಶ್ರೀ ಮಠಕ್ಕೆ ಆಗಮಿಸಿ ಶಾರದಾಂಬೆಯ ದರ್ಶನ ಪಡೆದರು.ಶ್ರೀ ತೋರಣ ಗಣಪತಿ, ಶ್ರೀ ಶಂಕರಾಚಾರ್ಯ, ಶ್ರೀ ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ನಂತರ ನರಸಿಂಹವನದಲ್ಲಿನ ಶ್ರೀ ಗುರುನಿವಾಸಕ್ಕೆ ತೆರಳಿ ಶ್ರೀ ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ವಸ್ತು ಸಂಗ್ರಹಾಲಯ ಸಪ್ತಾಹ ರಾಜ್ಯಾದ್ಯಂತ
ಶಿವಮೊಗ್ಗ: ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮೇ 18ರಿಂದ 24ರ ವರೆಗೆ ರಾಜ್ಯದಾದ್ಯಂತ ವಸ್ತು ಸಂಗ್ರಹಾಲಯ ಸಪ್ತಾಹವನ್ನು ಆಚರಿಸಲಿದೆ. ಈ ಸಪ್ತಾಹದ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಮಹತ್ವದ ಪ್ರಾಚೀನ ವಸ್ತುಗಳನ್ನ್ನು ಸಂಗ್ರಹಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಪ್ರಾಚೀನ ಶಿಲಾ ಶಾಸನಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ಪ್ರಾಚೀನ ಶಿಲ್ಪಗಳು, ತಾಳೇಗರಿ, ನಾಣ್ಯಗಳು, ಆಯುಧಗಳು, ಕಂಚಿನ ವಿಗ್ರಹಗಳು ಹಾಗೂ ಇನ್ನಿತರೆ ಪ್ರಾಚೀನ ವಸ್ತುಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯಕ ನಿರ್ದೇಶಕರು, ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರ್ಕಾರಿ ವಸ್ತು ಸಂಗ್ರಹಾಲಯ, ಶಿವಪ್ಪನಾಯಕ ಅರಮನೆ, ಕೋಟೆ ರಸ್ತೆ, ಶಿವಮೊಗ್ಗ, ದೂರವಾಣಿ ಸಂಖ್ಯೆ 08182 221992 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement