ಕಡೂರಲ್ಲಿ ತಂಪೆರೆದ ಮಳೆ
ಕ.ಪ್ರ.ವಾರ್ತೆ, ಕಡೂರು, ಮೇ 19 ಕಡೂರು ಪಟ್ಟಣದಲ್ಲಿ ಕಳೆದ ಶನಿವಾರ ಸಂಜೆ ಕಡೂರು ತಾಲೂಕಿನ ಹಲವು ಕಡೆ ಭಾರೀ ಗುಡುಗು ಸಿಡಿಲಿನ ಮತ್ತು ಮಿಂಚಿನಿಂದ ಕೂಡಿದ ಮಳೆ ಬಂದು ಕಡೂರು ತಾಲೂಕಿನ ಜನರಿಗೆ ತಂಪೆರೆಯಿತು.
ಶನಿವಾರ ಸಂಜೆ ಕಡೂರು ಸೇರಿದಂತೆ ಗ್ರಾಮಾಂತರ ಪ್ರದೇಶದ ಹಲವು ಕಡೆ ಬೀಸಿದ ಭಾರಿ ಮಳೆಯಿಂದ ರೈತರು ಸಂತುಷ್ಟರಾಗಿದ್ದಾರೆ. ಮುಖ್ಯವಾಗಿ ಕುಡಿಯುವ ನೀರು ಮತ್ತು ದನಕರುಗಳಿಗೆ ನೀರಿನ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆರೇಳು ತಿಂಗಳಿಂದ ತಾಲೂಕಿನ ಜನತೆಯ ಕೇವಲ ಮೋಡ ಗುಡುಗು ಮಿಂಚನ್ನು ನೋಡಿ ಕಂಗಾಲಾಗಿದ್ದರು.
ಇದೀಗ ಬಂದಿರುವ ಭಾರೀ ಮಳೆಯಿಂದಾಗಿ ಹಲವೆಡೆ ಮರಗಳು ನೆಲಕ್ಕುರುಳಿವೆ. ಯಗಟಿ ಹೋಬಳಿಯ ಹರಿಸಮುದ್ರ ಮತ್ತು ಯಗಟಿ ಹೋಬಳಿ ಸೇರಿದಂತೆ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಅಡಕೆ ಮತ್ತು ತೆಂಗಿನ ಮರಗಳು ನೆಲಕ್ಕುರುಳಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಮಳೆಯಿದಾಗಿ ತಾಲೂಕಿನ ಅಂತರ್ಜಲ ಸ್ವಲಮಟ್ಟಿಗೆ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆಗೆ ನಿವಾರಣೆಯಾಗಿ ಕೊಳವೆಬಾವಿಗಳ ಅಂತರ್ಜಲಮಟ್ಟ ಸ್ವಲಮಟ್ಟಿಗೆ ನಿವಾರಣೆಯಗಲಿದೆ ಎಂಬ ವಿಶ್ವಾಸ ಜನರದ್ದಾಗಿದೆ.