ಕಾಲೇಜು ಸೇರಲು ತೆರಳಿದ್ದ ಬಾಲಕಿ ನಾಪತ್ತೆ
ದಾವಣಗೆರೆ: ಪದವಿ ಪ್ರವೇಶಕ್ಕೆ ಕಾಲೇಜಿಗೆ ಅಡ್ಮಿಷನ್ ಮಾಡಿಸಲು ಹೋಗಿದ್ದ 17 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಪಾಲಕರು ಇಲ್ಲಿನ ಕೆ.ಟಿ.ಜೆ. ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಸರಸ್ವತಿ ನಗರದ ಖಾದಿ ಕೇಂದ್ರದ ಸಮೀಪದ ವಾಸಿ ಬೇಬಿಬಾಯಿ, ಲೋಕೇಶನಾಯ್ಕ ದಂಪತಿಯ ಪುತ್ರಿ ಎಲ್. ಸಿಂಧು(17 ವರ್ಷ) ನಾಪತ್ತೆಯಾದ ಯುವತಿ. ಕಳೆದ ಗುರುವಾರ ತಾನು ಬಿಎ ಓದಲಿಚ್ಛಿಸಿದ್ದು, ಕಾಲೇಜಿಗೆ ಅಡ್ಮಿಷನ್ ಮಾಡಿಸಲು ಹೋಗುವುದಾಗಿ ಮನೆಯಿಂದ ಹೊರಗೆ ಹೋದವಳು ಮನೆಗೆ ಮರಳಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕಿ 4 ಅಡಿ ಎತ್ತರ, ಸಾಧಾರಣ ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟಿನ ಸಿಂಧು ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಆಕೆ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಳು. ಈ ಚಹರೆಯ ಯುವತಿ ಯಾರಿಗಾದರೂ ಕಂಡು ಬಂದಲ್ಲಿ ತಕ್ಷಣ ಜಿಲ್ಲಾ ಪೊಲೀಸ್ ಕಚೇರಿ(ದೂ-08192- 253400), ಕೇಂದ್ರ ವೃತ್ತ ನಿರೀಕ್ಷಕ(259293)ಗೆ ಮಾಹಿತಿ ನೀಡುವಂತೆ ಸಬ್ ಇನ್ಸ್ಪೆಕ್ಟರ್ ರಮೇಶ ಕುಲಕರ್ಣಿ ಕೋರಿದ್ದಾರೆ.