ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇವೇಗೌಡರ ಹುಟ್ಟುಹಬ್ಬ ಆಚರಣೆ

Rashmi Kasaragodu
Updated On : 20 May 2013, 11:01 am

ಚಿಕ್ಕಮಗಳೂರು: ಜಾತ್ಯತೀತ ಜನತಾದಳದ ಜಿಲ್ಲಾ ಘಟಕ ಮತ್ತು ಸೇವಾದಳದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 81ನೇ ಹುಟ್ಟುಹಬ್ಬವನ್ನು ನಗರದಲ್ಲಿ ಶನಿವಾರ ಆಚರಣೆ ಮಾಡಲಾಯಿತು.
ಎಂ.ಜಿ. ರಸ್ತೆಯ ಗಣಪತಿ ದೇವಾಲಯದಲ್ಲಿ ಪಕ್ಷದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ದೇವೇಗೌಡರ ಆರೋಗ್ಯ ಮತ್ತು ಆಯುಷ ವೃದ್ದಿಗೆ ಪ್ರಾರ್ಥಿಸಿದರು.
ನಂತರ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ದೇವೇಗೌಡರು ಸಿಎಂ ಮತ್ತು ಪಿ.ಎಂ. ಆಗಿದ್ದಾಗ ರಾಜ್ಯದಲ್ಲಿ ನೀರಾವರಿ ಸೇರಿದಂತೆ ಜನಪರ ಅನೇಕ ಶಾಶ್ವತ ಯೋಜನೆಗಳಿಗೆ ಚಾಲನೆ ನೀಡಿದ ವ್ಯಕ್ತಿ ಎಂದರು.
ರಾಜ್ಯ ಪ್ರವಾಸ: ಎಚ್.ಎಚ್. ದೇವರಾಜ್ ಮಾತನಾಡಿ, ಸಾಮಾನ್ಯ ಜನರ ಬಗ್ಗೆ ಕಳಕಳಿ ಹೊಂದಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಹೋರಾಟ ಮಾಡಿದ ದೇವೇಗೌಡರಂತ ಮತ್ತೋರ್ವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. 81ರ ಇಳಿ ವಯಸ್ಸಿನಲ್ಲೂ ದೇಶದ ಚಿಂತನೆ ಹೊತ್ತು ಜನ ಸಾಮಾನ್ಯರ ಅಳಲನ್ನು ಆಲಿಸಲು ಲವಲವಿಕೆಯಿಂದ ರಾಜ್ಯ ಪ್ರವಾಸ ಮಾಡುತ್ತಿರುವ ಅಪರೂಪದ ರಾಜಕಾರಣಿ ಎಂದರು.
ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ, ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್, ಚಂದ್ರಪ್ಪ, ಎಂ.ಡಿ. ರಮೇಶ್, ಜೈರಾಜ್ ಅರಸ್, ಕೆ. ಭರತ್, ರವಿ, ಬೈರೇಗೌಡ, ಎಚ್.ಎನ್. ಕೃಷ್ಣೇಗೌಡ, ಜಯಂತಿ ಹಾಜರಿದ್ದರು.
ಸೇವಾದಳ: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ 81ನೇ ಹುಟ್ಟುಹಬ್ಬ ಆಚರಣೆ ಸಮಾರಂಭವನ್ನು ಸೇವಾದಳದ ರಾಜ್ಯಾಧ್ಯಕ್ಷ ಬಿ.ಎನ್. ಬಸವರಾಜ್ ಪಾದಯಾತ್ರಿ ಉದ್ಘಾಟಿಸಿದರು.
ಬಳಿಕ  ಮಾತನಾಡಿದ ಅವರು, ಕ್ರಿಕೆಟಿಗನೊಬ್ಬ ಸೆಂಚುರಿ ಬಾರಿಸಿದರೆ ಪಟಾಕಿ ಸಿಡಿಸಿ ಸಂಭ್ರಮಿಸುವ ನಾವು ರಾಷ್ಟ್ರದ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದವರಿಗೆ ಶಕ್ತಿ ತುಂಬದ ನಾವು ಅಭಿಮಾನಿ ಶೂನ್ಯರಲ್ಲವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಸವರಾಜು, ಎಚ್.ಎಚ್. ದೇವರಾಜ್ ಮಾತನಾಡಿದರು. ಮಂಜು, ಚಂದ್ರಶೇಖರ್, ಮಂಜಪ್ಪ, ಹೊಲದಗದ್ದೆ ಗಿರೀಶ್, ಕೆ. ಭರತ್, ರಮೇಶ್, ಬೈರೇಗೌಡ, ಲಕ್ಷ್ಮಣ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement