ನಾಳೆಯಿಂದ ಜಾತ್ರಾ ಮಹೋತ್ಸವ
ಹರಿಹರ: ಮೇ 21ರಿಂದ 25ರ ವರೆಗೆ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಆಯೋಜಿಸಿದೆ. ಉತ್ಸವದ ಅಂಗವಾಗಿ 21ರಂದು ವೈಶಾಖ ಶುದ್ಧ ಏಕಾದಶಿಯಂದು ರಾತ್ರಿ 10.30ರಿಂದ ಶ್ರೀ ಕರಿಯಮ್ಮ ದೇವಿಯ ಘಟಿ ಹಾಗೂ ಹಿಟ್ಟಿನ ಕೋಣದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಹಿಟ್ಟಿನ ಕೋಣ ವಧಿಸಿ ಚರಗ ಚೆಲ್ಲಲಾಗುವುದು. 23 ರಿಂದ 25ರ ವರೆಗೆ ಗ್ರಾಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.
ನಾಳೆ ಕವಿಗೋಷ್ಠಿ
ಹರಿಹರ: ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಪ್ರಕಾಶನ ಭಾನುವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ 21ರಂದ ಗೃಹಗೋಷ್ಠಿ ಹಾಗೂ ಕವಿಗೋಷ್ಠಿಯನ್ನು ಹಮ್ಮಿಕೊಂಡಿದೆ. ಗ್ರಾಮದ ಮಸೀದಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ನಿಲಯದಲ್ಲಿ ಅಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಚುಸಾಪ ತಾಲೂಕು ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ ನೆರವೇರಿಸದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಕೆ. ಕೊಟ್ರೆಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು 9886524837 ಅಥವಾ 9731067467 ಸಂಪರ್ಕಿಸಲು ಕೋರಲಾಗಿದೆ.
ಕೆನರಾ ಬ್ಯಾಂಕ್‌ನಿಂದ ಉದ್ಯೋಗ ತರಬೇತಿ
ದಾವಣಗೆರೆ: ಕೆನರಾ ಬ್ಯಾಂಕ್‌ನ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ದಾವಣಗೆರೆ ಜಿಪಂ ಕಚೇರಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ನಿರುದ್ಯೋಗಿ ಯುವಕರಿಗೆ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ದುರಸ್ಥಿ ತರಬೇತಿ ಶಿಬಿರವನ್ನು ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ. ಹೆಸರು ನೋಂದಾಯಿಸಲು ಮೇ 25 ಅಂತಿಮ ದಿನ. ಮಾಹಿತಿಗೆ ದೂ-260031 ಸಂಪರ್ಕಿಸಿ.