23 ರಂದು ವಾಣಿಜ್ಯ ಮಳಿಗೆ ಉದ್ಘಾಟನೆ
ತರೀಕೆರೆ: ಬನಶಂಕರಿ ಪತ್ತಿನ ಸಹಕಾರ ಸಂಘದಿಂದ 23 ರಂದು ಬೆಳಿಗ್ಗೆ 11-30ಕ್ಕೆ ಕಚೇರಿಯ ನೂತನ ಕಟ್ಟಡ ಮತ್ತು ವಾಣಿಜ್ಯ ಮಳಿಗೆ ಉದ್ಘಾಟನಾ ಸಮಾರಂಭವನ್ನು ಮೈಸೂರು ಸಾಮಿಲ್ ರಸ್ತೆ, ಗಣಪತಿ ಪೆಂಡಾಲ್ ಎದುರುನಲ್ಲಿ ಏರ್ಪಡಿಸಲಾಗಿದೆ.
ಹಂಪೆ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿ ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಜಿ.ಎಚ್. ಶ್ರೀನಿವಾಸ್ ವಾಣಿಜ್ಯ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದು, ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಭಾಗ್ಯ ಚಂದ್ರಶೇಖರ್ ಭದ್ರತಾ ಕೊಠಡಿ
ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಬಿ.ಎಸ್.ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಶಾಸಕ ಡಿ.ಎಸ್. ಸುರೇಶ್, ತಾ.ದೇವಾಂಗ ಸಂಘದ ಅಧ್ಯಕ್ಷ ಟಿ.ಆರ್. ನಾಗರಾಜ್, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಬಿ.ಆರ್. ಮಂಜುನಾಥ್, ಕೆ.ಎಂ. ಶಿವಕುಮಾರಸ್ವಾಮಿ, ಎಸ್. ಲಕ್ಷ್ಮಣ್, ಕೆ.ಎಸ್. ರಮೇಶ್, ಎಸ್. ಶಿವಾನಂದ್, ಡಾ. ಗಿರೀಶ್ ಭಾಗವಹಿಸಲಿದ್ದಾರೆ.