ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

27ರಂದು ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 21 May 2013, 11:48 am

ಕ.ಪ್ರ.ವಾರ್ತೆ   ಚಿಕ್ಕಮಗಳೂರು   ಮೇ 20
ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಮೇ 27 ರಂದು ದೇಶ ವ್ಯಾಪಿ ಪ್ರತಿಭಟನೆ ಹಾಗೂ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಹೇಳಿದ್ದಾರೆ.
ಯುಪಿಎ ಸರ್ಕಾರದಲ್ಲಿ ಭ್ರಷ್ಟಚಾರ ಜನಜನಿತವಾಗಿದೆ. ಇದಕ್ಕೆ ಇಬ್ಬರು ಕೇಂದ್ರದ ಮಂತ್ರಿಗಳು ತಲೆದಂಡ ಕೊಡಬೇಕಾಯಿತು. ಇದರ ಹೊಣೆಯನ್ನು ಪ್ರಧಾನಮಂತ್ರಿಯವರು ಹೊರಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದಾರಿ ತಪ್ಪಿಸುವ ಕೇಂದ್ರ: ಕೇಂದ್ರ ಸರ್ಕಾರ ಸಿಬಿಐಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಇದು, ಜನರನ್ನು ದಾರಿ ತಪ್ಪಿಸುವ ಕೆಲಸ ಎಂದರು.
ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ. ಅಭಿವೃದ್ಧಿ ಕಾರ್ಯವನ್ನು ಜನರು ಸ್ವೀಕಾರ ಮಾಡಿಲ್ಲ. ಈ ಜನಾದೇಶವನ್ನು ಪಾಲಿಸುತ್ತೇವೆ. ಬಿಜೆಪಿ ಉತ್ತಮ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿ ಆಡಳಿತದ ಮೊದಲ ಮೂರು ವರ್ಷ ಆಂತರಿಕ ಗೊಂದಲಗಳಿದ್ದವು. ಕೊನೆಯ ಎರಡು ವರ್ಷಗಳಲ್ಲಿ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡಿದ್ದೇವೆ. ಬಿಜೆಪಿಯಲ್ಲಿನ ಗೊಂದಲಗಳು ಜನರಲ್ಲಿ ಬೇಸರ ಮೂಡಿಸಿವೆ. ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್‌ಗೆ ಜನಪರ ಆಡಳಿತಕ್ಕಾಗಿ ಸಹಕಾರ ನೀಡುತ್ತೇವೆ. ಆದರೆ, ತಪ್ಪುಗಳನ್ನು ಗುರುತಿಸುವುದು ಎಚ್ಚರಿಕೆ ಕೊಡುವ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ತಕ್ಷಣ ವೈರತ್ವ ಸಾಧಿಸಲಿಕ್ಕೆ  ಹೊರಟಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮರು ಚಿಂತನೆ ಮಾಡಿ ಮಾರ್ಪಡಿಸಲಾಗುವುದು ಎಂದಿದ್ದಾರೆ. ಈ ಹಿಂದೆ ಕಳುಹಿಸಿಸುವ ಗೋಹತ್ಯೆ ನಿಷೇಧ ವಿಧೇಯಕವನ್ನು ರಾಜ್ಯಪಾಲರು ಅನುಷ್ಠಾನಕ್ಕೆ ತರಬೇಕು ಎಂದು  ಆಗ್ರಹಿಸಿದರು.
ಸೂಕ್ತ ಸಮಯದಲ್ಲಿ ಉತ್ತರ: ಗೋ ಹತ್ಯೆ ನಿಷೇಧ ಕಾಯ್ದೆಯ ಹೇಳಿಕೆ ಬಹು ಸಂಖ್ಯಾತ ಜನರಿಗೆ ಆಘಾತ ಉಂಟು ಮಾಡಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ. ದುರಾಡಳಿತ ಮತ್ತು ವೈರುತ್ವದ ವಿರುದ್ಧ ಸೂಕ್ತ ಸಮಯದಲ್ಲಿ ಸಮರ್ಥ ಉತ್ತರ ಕೊಡಲು ಬಿಜೆಪಿ ಸಿದ್ಧವಿದೆ ಎಂದರು.
ಪಕ್ಷದ ಸಂಘಟನೆಗಾಗಿ ಮೇ 25 ಮತ್ತು 26 ರಂದು ಸದಸ್ಯತ್ವ ಅಭಿಯಾನ ನಡೆಸಲಾಗುವುದು, ಮೇ 29 ರಂದು ರಾಜ್ಯದ ಕೇಂದ್ರ ಸ್ಥಾನದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement