ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಪಾಯದಲ್ಲಿ ತೂಗು ಸೇತುವೆ; ಆತಂಕ

Rashmi Kasaragodu
Updated On : 21 May 2013, 11:50 am

ಕ.ಪ್ರ.ವಾರ್ತೆ ಟಿ ಕೊಪ್ಪ ಟಿ  ಮೇ 20
ತಾಲೂಕಿನ ಹರಿಹರಪುರದ ಚಿತ್ರಕೂಟದ ಸಮೀಪದಲ್ಲಿ ತುಂಗಾನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣದ ನಂತರ ನಿರ್ವಹಣೆ ಇಲ್ಲದೆ ಸೇತುವೆಯ ಇಕ್ಕೆಲದಲ್ಲಿ ಮೆಸ್ ಕಿತ್ತು ಹೊಗಿ ನಿತ್ಯ ಸಂಚರಿಸುವ ಗ್ರಾಮಸ್ಥರು ಜೀವಭಯದಿಂದ ಸಂಚರಿಸುವ ವಾತವರಣ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
2001ರಲ್ಲಿ ಜಿಪಂ, ತಾಪಂ ಹಾಗೂ ಹಿರೇಕೂಡಿಗೆ ಮತ್ತು ಕೊಪ್ಪ ಗ್ರಾಮಾಂತರ ಗ್ರಾಪಂಗಳ ಆಶ್ರಯದಲ್ಲಿ ರು. 14.50 ಲಕ್ಷ ವೆಚ್ಚದಲ್ಲಿ 1 ಮೀಟರ್ ಅಗಲದ 116 ಮೀಟರ್ ಉದ್ದದ ತೂಗು ಸೇತುವೆಯನ್ನು ಹರಿಹರಪುರ, ಸಿತಾರಾಮ ಪುರ, ಮುಂಡಿಗೆಮನೆ, ಬೊಮ್ಲಾಪುರ, ನುಗ್ಗಿಮಕ್ಕಿ,
ಮೆಣಸೂರು, ಹೀರೆಕೂಡಿಗೆ, ಸೂರ್ಯದೇವಸ್ಥಾನ, ಸಿಗದಾಳ್ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು. ಇಲ್ಲಿ ಶಾಲಾ ಕಾಲೇಜು ಮಕ್ಕಳು, ಗ್ರಾಮಸ್ಥರು, ಕೂಲಿಕಾರ್ಮಿಕರು ಸೇರಿದಂತೆ ದ್ವಿಚಕ್ರ ವಾಹನಗಳು ದಿನ ನಿತ್ಯ ನೂರಾರು ಜನರು ಈ ಸೇತುವೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಅದರೆ ಸೇತುವೆಯಿಂದ ಕೆಳಗೆ ಬಿಳದಂತೆ ಇಕ್ಕೆಲದಲ್ಲಿ ತಂತಿಯ ಮೆಸ್ ಹಾಕಿರುವ ಎರಡು ಬದಿ ಕಬ್ಬಿಣದ ಸಲಾಕೆಗೂ ಮತ್ತು ಮೆಸ್‌ಗೂ ಸೇರಿಸಿ ತಂತಿಯಿಂದ ಕಟ್ಟಾಲಾಗಿತ್ತು. ಇದು ತುಕ್ಕು ಹಿಡಿದಿರುವುದರಿಂದ ಕಬ್ಬಿಣದ ಸಲಾಕೆಯಿಂದ ತಂತಿ ಮೆಸ್ ಬೇರ್ಪಟ್ಟಿವೆ.
ಅಲ್ಲದೆ ಕಬ್ಬಿಣ ಸಲಾಕೆಗಳನ್ನು ಒಂದಕ್ಕೂಂದು ಸೇರಿಸಿರುವ ಬೋಲ್ಟ್ ಮತ್ತು ನೆಟ್‌ಗಳು ತುಕ್ಕು ಹಿಡಿದಿದೆ. ಇನ್ನೂ ಕೆಲಕಡೆ ಮೆಸ್‌ನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ ಇದರಿಂದ ಈ ಮಾರ್ಗವಾಗಿ ಸಂಚರಿಸುವ ಶಾಲಾಮಕ್ಕಳು ಮತ್ತು ಗ್ರಾಮಸ್ಥರು ಅಂತಕದಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಬೈಕ್ ಸವಾರ ಆಯಾ ತಪ್ಪಿದರೆ ಅವಘಡ ಸಂಭವಿಸುವುದು ಖಚಿತ. ಅದ್ದರಿಂದ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜುಗಳು ಆರಂಭಕ್ಕೂ ಮುನ್ನಾ ತ್ವರಿತಗತಿಯಲ್ಲಿ ರಿಪೇರಿ ಮಾಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement