ಉಮಾಶ್ರೀಗೆ ಸಚಿವ ಸ್ಥಾನ: ಅಭಿನಂದನೆ
ತರೀಕೆರೆ: ರಾಜ್ಯ ಸಚಿವ ಸಂಪುಟದಲ್ಲಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಪಕ್ಷದ ವರಿಷ್ಠರನ್ನು ಪಟ್ಟಣದ ಬನಶಂಕರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಮಂಡಳಿ ನಿರ್ದೇಶಕ ಶ್ರೀಧರ್ ಅಭಿನಂದಿಸಿದ್ದಾರೆ.
23ರಂದು ನರಸಿಂಹ ಜಯಂತಿ
ತರೀಕೆರೆ: ಬಗ್ಗವಳ್ಳಿಯ ಯೋಗಾ ನರಸಿಂಹಸ್ವಾಮಿ ಸೇವಾ ಟ್ರಸ್ಟ್‌ನ ಸದಸ್ಯರು ಮತ್ತು ಗ್ರಾಮಸ್ಥರು ಇಲ್ಲಿನ ಯೋಗಾನರಸಿಂಹಸ್ವಾವು ದೇವಸ್ಥಾನದಲ್ಲಿ ಮೇ 23ರಂದು ನರಸಿಂಹ ಜಯಂತಿ ಮಹೋತ್ಸವವನ್ನು ಏರ್ಪಡಿಸಿದ್ದಾರೆ. ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನದ ಅಭಿನವ ವಿದ್ಯಾಶಂಕರ ಭಾರತಿ ಶ್ರೀ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ನರಸಿಂಹ ಹೋಮ, ಪವಮಾನ ಹೋಮ ಸೇರಿದಂತೆ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ.