ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೆರವಿಗೆ ಮನವಿ

Rashmi Kasaragodu
Updated On : 21 May 2013, 11:51 am

ನರಸಿಂಹರಾಜಪುರ: ಸೀತೂರು ಗ್ರಾಪಂ ವ್ಯಾಪ್ತಿಯ ನಾಗರಮಕ್ಕಿಯಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ  ಎಚ್.ಎನ್. ಸುಕುಮಾರ್ ಎಂಬುವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಅವರು ಸಾರ್ವನಿಕರಿಂದ ನೆರವು ಕೋರಿದ್ದಾರೆ.   ಕ್ಷೌರಿಕ ವೃತ್ತಿಯೇ ಆಧಾರವಾಗಿರುವ ಸುಕುಮಾರ್ ಅವರಿಗೆ ಬಲಗಾಲಿನಲ್ಲಿ ಸೆಲ್ಯುಲಿಟೀಸ್ ಎಂಬ ರೋಗ ಕಾಣಿಸಿಕೊಂಡಿದ್ದು, ಮಂಗಳೂರಿನ ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೋಗಕ್ಕೆ 5 ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಈಗಾಗಲೇ ರು. 2 ಲಕ್ಷ 60 ಸಾವಿರ ಖರ್ಚಾಗಿದೆ. ಇನ್ನೂ  ರು. 2 ಲಕ್ಷ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಇವರಿಗೆ ಆರ್ಥಿಕ ಸಹಾಯ ನೀಡಲು ಇಚ್ಚಿಸುವವರು ಕುದುರೆಗುಂಡಿಯ ಕರ್ನಾಟಕ ಬ್ಯಾಂಕಿನ ಎಚ್.ಎನ್. ಸುಕುಮಾರ್ ಅವರ ಖಾತೆಗೆ ಜಮಾ ಮಾಡಬಹುದು. ಕುದುರೆಗುಂಡಿ ಕರ್ನಾಟಕ ಬ್ಯಾಂಕ್, ಪಿ.ಆರ್. ಸುಕುಮಾರ್, ಖಾತೆ ಎಸ್.ಬಿ.ನಂ 4202500100473301. ಐ.ಎಫ್.ಸಿ. ಕೋಡ್ ಕೆ.ಎ.ಆರ್.ಬಿ. 0000420.  ಎಚ್.ಎನ್. ಸುಕುಮಾರ್ ಮೊ. 9481577028
24ರಂದು ವೈಕಾಶಿ ವಿಶಾಖ ಉತ್ಸವ
ಚಿಕ್ಕಮಗಳೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಕುಮಾರಗಿರಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ವೈಕಾಶಿ ವಿಶಾಖ ಉತ್ಸವ ಮೇ 24 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಅಂದು ಬೆಳಗ್ಗೆ 7 ಗಂಟೆಗೆ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ತಮಿಳು ಜನಾಂಗದ ಭಕ್ತರು ಹಾಲು ತುಂಬಿದ ಕಳಸಗಳನ್ನಿಟ್ಟು ಪೂಜಿಸಿ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿ ಮತ್ತು ಮಂಗಳವಾದ್ಯಗಳೊಂದಿಗೆ ಕಳಸಗಳನ್ನು ತಲೆಯ ಮೇಲೆ ಹೊತ್ತು ಹಳೇ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ವಾಹನಗಳಲ್ಲಿ ಕುಮಾರಗಿರಿಗೆ ತೆರಳಲಿದ್ದಾರೆ.
ಭಕ್ತರು ಹೊತ್ತು ತಂದ ಕಳಸಗಳ ಹಾಲಿನಿಂದ ಕುಮಾರಗಿರಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ ಜರುಗಲಿದ್ದು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಜಿ. ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿದ ಬಿಸಿಲು
ಶೃಂಗೇರಿ: ತಾಲೂಕಿನಾದ್ಯಂತ ಕೆಲ ದಿನಗಳಿಂದ ಬಿಸಿಲ ತಾಪ ಹೆಚ್ಚಾಗತೊಡಗಿದೆ. ಆಗೊಮ್ಮೆ, ಈಗೊಮ್ಮೆ ಅಲ್ಪ ಸ್ವಲ್ಪ ಮಳೆ ಬೀಳುತ್ತಿದ್ದರೂ ದಿನೇ ದಿನೇ ಬಿಸಿಲ ದಗೆ ಏರತೊಡಗಿದೆ. ಈಗಾಗಲೇ ಹಿಂಗಾರು ದುರ್ಬಲಗೊಂಡಿದ್ದರಿಂದ ಕೆರೆ, ಬಾವಿ ಬತ್ತಿಹೋಗಿದ್ದು, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸೋಮವಾರದಿಂದ  ಗುಡುಗು ಸಹಿತ ಮೋಡಕವಿದ ವಾತಾವರಣ ಉಂಟಾಗಿತ್ತು. ಇದೇ ರೀತಿ ಮಂದುವರೆದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments