ಉರೂಸ್ ಕಾರ್ಯಕ್ರಮ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮೇ 21 ಬೈಬಲ್, ಕುರಾನ್ ಅಥವಾ ಭಗವದ್ಗೀತೆಗಳು ಅಹಿಂಸೆಯನ್ನೇ ಬೋಧಿಸುತ್ತದೆ. ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯಸುತ್ತದೆ ಎಂದು ಉಳ್ಳಾಲದ ಮುನಿರುಲ್ ಅಹಮದ್ ಖಾಫಿ ತಿಳಿಸಿದರು.
ಅವರು ಭಾನುವಾರ ಕುದುರೆಗುಂಡಿಯ ನಡೆದ ಬದ್ರಿಯಾ ಮಸೀದಿ ಆವರಣದಲ್ಲಿರುವ ಹಝ್ರತ್ ಸೈಯದ್ ಸದತ್ ಷರೀಪುಲ್ ಔಲಿಯಾ ಅವರ 83ನೇ ವಾರ್ಷಿಕ ಉರೂಸ್ ಕಾರ್ಯಕ್ರಮದ ಅಂಗವಾಗಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪದ ಮೊಯ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎನ್.ಎಚ್. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕಡೇ ಗದ್ದೆಯ ಕೃಷಿಕ ಚಕ್ರಪಾಣಿ, ಮುಖಂಡ ಸುಧಾಕರ ಶೆಟ್ಟಿ, ಜಿ. ಹಿರಿಯಣ್ಣ, ಕೊರಡ ಹಿತ್ತಲು ಅಹಮ್ಮದ್ ಹಾಜಿ, ನಾರ್ವೆಯ ಶಬ್ಬೀರ್, ಮಸೀದಿ ಸಮಿತಿಯ ಅಧ್ಯಕ್ಷ ರಜಬ್ ಮೊದಲಾದವರು ಉಪಸ್ಥಿತರಿದ್ದರು.