ಗುಡುಗು ಸಹಿತ ಮಳೆ
ಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು ಸಹಿತ ಧಾರಕಾರ ಮಳೆ ಸುರಿದಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿಯಿಂದ ಬೆಳಗಿನಜಾವದವರೆಗೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು.
ಮಳೆಯ ರಭಸಕ್ಕೆ ಚರಂಡಿಯಲ್ಲಿ ನೀರು ಉಕ್ಕಿ ಹರಿಯಿತು.
ಮಂಗಳಾರವೂ ಸಂಜೆಯವರೆಗೆ ಮೋಡಕವಿದ ವಾತಾವರಣ ಮುಂದುವರೆದಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿಯಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕ ಮಂಗಳವಾರ ಸಂಜೆಯವರೆಗೂ ಸಮರ್ಪಕವಾಗಿರಲಿಲ್ಲದೆ ಹಾಗೆಯೇ ಮುಂದುವರೆದಿತ್ತು.