ನಾಳೆ ನಾಗಬ್ರಹ್ಮ ಪ್ರತಿಷ್ಠಾ ಮಹೋತ್ಸವ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಳ್ಳಿ ಗ್ರಾಮದ ಹೊಳೆಹದ್ದು ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಗುರುವಾರ ನಾಗಬ್ರಹ್ಮ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅಷ್ಟಬಂಧ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸುಗೊಳಿಸಬೇಕೆಂದು ಕೋರಲಾಗಿದೆ.
ಜಿಲ್ಲಾ ಅಂಗವಿಕಲರ ಸಮೀಕ್ಷೆ
ಚಿಕ್ಕಮಗಳೂರು: ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣಾಧಿಕಾರಿಗಳು ವಿಕಲಚೇತನರ ಫಲಾನುಭವಿಗಳನ್ನು ಗುರುತಿಸಿ, ಫಲಾನುಭವಿಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ನಗರಸಭೆ ಕಚೇರಿಯ ಕರವಸೂಲಿಗಾರರಿಂದ ಮೇ 28 ರವರೆಗೆ ವಿಕಲ ಚೇತನರ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮ ಮನೆಗೆ ಸಮೀಕ್ಷೆಗೆ ಬಂದಾಗ ವಿಕಲಚೇತನರ ಸಮೀಕ್ಷೆಗೆ ಮಾಹಿತಿ ನೀಡಲು ಕೋರಿದೆ.