ಬಾರ್ ಮಾಲೀಕನ ಮೇಲೆ ದಾಳಿ: ಗಾಯ
ಶಿವಮೊಗ್ಗ: ಮದ್ಯ ವಿತರಿಸದ ಕಾರಣ ರೊಚ್ಚಿಗೆದ್ದ ಐದಾರು ಜನರ ಗುಂಪೊಂದು ಬಾರ್ ಮಾಲೀಕ ಹಾಗೂ ಆತನ ಸಂಬಂಧಿಯ ಮೇಲೆ ಭರ್ಜಿಯಿಂದ ದಾಳಿ ನಡೆಸಿದ ಘಟನೆ ನಗರದ ಎನ್.ಟಿ. ರಸ್ತೆಯ ಸುಂದರಾಶ್ರಯ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ನಡೆದಿದೆ. ಮಾಲೀಕ ಅನಿಲ್ ಶೆಟ್ಟಿ ಹಾಗೂ ಅವರ ಸಂಬಂಧಿ ಪುರುಷೋತ್ತಮ್ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮದ್ಯ ಮಾರಾಟದ ಅವಧಿ ಮುಕ್ತಾಯವಾದ ನಂತರ ರಾತ್ರಿ ಬಾರ್ ಬಾಗಿಲು ಹಾಕಿಕೊಂಡು ತಮ್ಮ ಇಬ್ಬರು ಸಂಬಂಧಿಗಳೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಆಟೋದಲ್ಲಿ ಐದಾರು ಜನರಿದ್ದ ಗುಂಪೊಂದು ಆಗಮಿಸಿದೆ. ವಿಸ್ಕಿ ಬೇಕೆಂದು ಕೇಳಿದ್ದು ಅಂಗಡಿ ಬಾಗಿಲು ಹಾಕಿದ್ದ ಕಾರಣ ಮಾಲೀಕ ವಿಸ್ಕಿ ಇಲ್ಲವೆಂದು ತಿಳಿಸಿದ್ದಾರೆ.