ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜೀವ್ ಪುಣ್ಯತಿಥಿ ಆಚರಣೆ

Rashmi Kasaragodu
Updated On : 22 May 2013, 11:29 am

ನರಸಿಂಹರಾಜಪುರ: ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮೊಬೈಲ್‌ಗಳನ್ನು ಭಾರತ ದೇಶಕ್ಕೆ ಪರಿಚಯಿಸಿ ಸಂಪರ್ಕ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿ ಹುಟ್ಟು ಹಾಕಿದರು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಸದಾಶಿವ ತಿಳಿಸಿದರು.
ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಅವರ 22ನೇ ಪುಣ್ಯತಿಥಿ ಅಂಗವಾಗಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಚಾರ್ಚನೆ ಮಾಡಿ ಮಾತನಾಡಿದರು.
ರಾಜೀವ್ ಗಾಂಧಿ ಕಾಲದಲ್ಲಿ ಭಾರತಕ್ಕೆ ಐಟಿಬಿಟಿ ಕ್ಷೇತ್ರಗಳ ಪರಿಚಯವಾಯಿತು. 74ನೇ ವಿಧಿಗೆ ತಿದ್ದುಪಡಿ ತಂದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಿದ್ದರು. ಸ್ತ್ರೀ ಶಕ್ತಿ ಗುಂಪುಗಳ ರಚನೆ, ಮಕ್ಕಳಿಗೆ ಬಿಸಿಯೂಟ ನೀಡುವುದು ರಾಜೀವ್ ಅವರ ಕಲ್ಪನೆಯ ಕೂಸುಗಳಾಗಿದ್ದವು ಎಂದರು.
ಪಕ್ಷದ ಮುಖಂಡ ನಹೀಂ, ಪಟ್ಟಣ ಪಂಚಾಯ್ತಿ ಸದಸ್ಯ ಲಕ್ಷ್ಮಣಶೆಟ್ಟಿ, ಕಸಬೇ ಹೋಬಳಿ ಅಧ್ಯಕ್ಷ ಶೇವಿಯಾರ್ ರಾಜೀವ್ ಗಾಂಧಿ ಬಗ್ಗೆ ಮಾತನಾಡಿದರು.
ಪಕ್ಷದ ನಗರ ಅಧ್ಯಕ್ಷ ಕೆ.ವಿ. ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಕ್ಷದ ಮುಖಂಡರಾದ ಕೆ.ಎ. ಅಬೂಬಕರ್, ಮಾಳೂರು ದಿಣ್ಣೆ ರಮೇಶ್, ಬೇಬಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement