ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರ್ಜಿ ಆಹ್ವಾನ

Rashmi Kasaragodu
Updated On : 23 May 2013, 11:27 am

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನಲ್ಲಿನ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಬಾಲಕ, ಬಾಲಕಿಯರ ವಿ.ನಿಲಯ ಚಿತ್ರದುರ್ಗ, ಬಿ.ಸಿ.ಎಂ ಹಾಸ್ಟೆಲ್ ಗೊಡಬನಹಾಳ್, ಕುರುಬರಹಳ್ಳಿ, ಹಿರೇಗುಂಟನೂರು, ಕಾಲಗೆರೆ, ಭರಮಸಾಗರ, ದ್ಯಾಮವ್ವನಹಳ್ಳಿ, ಬೆಳಗಟ್ಟ, ಕಡಬನಕಟ್ಟೆ ಹಾಗೂ ಖಾಸಗಿ ಅನುದಾನಿತ ಹಾಸ್ಟೆಲ್‌ಗಳಾದ ಕಬೀರಾನಂದಾಶ್ರಮ, ಬಹದ್ದೂರ್ ಘಟ್ಟ ಇಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸಕ್ತ ಸಾಲಿಗೆ 5 ರಿಂದ 10 ನೇ ತರಗತಿವರೆಗೆ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ನೀಡಲಾಗುತ್ತದೆ.
ವರ್ಗ 1, 2ಎ, ಬಿ, 3ಎ, ಬಿ, ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಅಥವಾ ತಾಲೂಕು ಪಂಚಾಯತ್‌ನಲ್ಲಿನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗಾಗಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನುಂಕೆಮಲೆ ಸಿದ್ದೇಶ್ವರ ಸಿಡಿ
ಮೊಳಕಾಲ್ಮುರು: ದಕ್ಷಿಣ ಕಾಶಿ ಎಂದೇ ಬಿಂಬಿಸಲ್ಪಡುವ ತಾಲೂಕಿನ ಐತಿಹಾಸಿಕ ನುಂಕೆಮಲೆ ಬೆಟ್ಟದ ಮೇಲಿರುವ ಕಾಲ ಭೈರವ ಸಿದ್ದೇಶ್ವರ ಸ್ವಾಮಿಯ ಸಿಡಿ ಮಹೋತ್ಸವ ವೈಭವದಿಂದ ಜರುಗಿತು.  ಜಿಲ್ಲೆಯ ಗಡಿಭಾಗವಾದ ಮೊಳಕಾಲ್ಮುರು ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಈ ಬೆಟ್ಟದಲ್ಲಿ, ಪ್ರತಿ ವರ್ಷದಂತೆ 8 ದಿನ ಕಾಲ ಜರುಗುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆಯಲಿವೆ. 11ನೇ ಶತಮಾನದಲ್ಲಿ ಈ ಪ್ರಾಂತ್ಯ ಕದಂಬ ರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಆ ಕಾಲಮಾನದಿಂದಲೂ ಈ ಸ್ಥಳದಲ್ಲಿ ನುಂಕಿಮಲೆ ಸಿದ್ದೇಶ್ವರ ಸ್ವಾಮಿಯ ಜಾತ್ರೆ ನಡೆದು ಈ ಭಾಗದ ಸುತ್ತಲಿನ ಜನರ ಆರಾಧ್ಯ ದೈವವಾಗಿದೆ.  ಕದಂಬರ ಆಳ್ವಿಕೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ನಾಥ ಪಂಥಕ್ಕೆ ಸೇರಿದ ಮಂಗಲ್‌ನಾಥ್ ಶ್ರೀ ಬೆಟ್ಟದ ಪೀಠಾಧ್ಯಕ್ಷರಾಗಿದ್ದಾರೆ. ಇವರ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವ ಜರುಗಲಿದೆ.   ಈ ಜಾತ್ರೆ ಮೊಳಕಾಲ್ಮುರು ತಾಲೂಕಿನಲ್ಲಿ ದೊಡ್ಡ ಜಾತ್ರೆಯಾಗಿದ್ದು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಪಕ್ಕದ ಆಂಧ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಜಾತ್ರೆಯಲ್ಲಿ ಭಾಗವಹಿಸಿ ದೇವರಿಗೆ ಹರಕೆ ತೀರಿಸುವರು. 22ರಂದು ಸಿದ್ದು ಭುಕ್ತಿ 8 ದಿನಗಳಕಾಲ ಜರುಗುವ ಜಾತ್ರೆಗೆ ತೆರೆಬೀಳುವುದು.
25, ಸಮಾವೇಶ
ದಾವಣಗೆರೆ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವುದು, ಸೂಕ್ತ ಬೆಲೆ ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಬಗ್ಗೆ ಚರ್ಚಿಸಲು ಕಬ್ಬು ಬೆಳೆಗಾರ ರೈತರ ರಾಷ್ಟ್ರೀಯ ಸಮಾವೇಶ ಮೇ 25ರಿಂದ ಎರಡು ದಿನಗಳ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆಯಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments