ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇನಾಂ ಭೂಮಿ: ಸುಪ್ರೀಂಗೇ ಅಫಿಡವಿಟ್

Rashmi Kasaragodu
Updated On : 23 May 2013, 11:10 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಮೇ 22
ಈಗ ರಾಜ್ಯ, ಕೇಂದ್ರ ಎರಡೂ ಕಡೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಇಲ್ಲಿನ ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಧಾನಮಂತ್ರಿ ಬಳಿ ನಿಯೋಗ ಹೋಗಿ ಇನಾಂ ಭೂಮಿಯ ಶೀಘ್ರ ಶಮನಕ್ಕಾಗಿ ಕೇಂದ್ರ ಸರ್ಕಾರದಿಂದ ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.
ಕಳಸದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನಾಂ ಭೂಮಿ ಸಮಸ್ಯೆಯಿಂದ ಯಾರೂ ಭಯಭೀತರಾಗುವುದು ಬೇಡ. ಈ ಸಮಸ್ಯೆಯನ್ನು ಖಂಡಿತವಾಗಿಯೂ ಪರಿಹರಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಕುದುರೆಮುಖ ಕಂಪೆನಿ ಸ್ಥಗಿತಗೊಂಡು ಇಲ್ಲಿರುವ ಎರಡು ಸಾವಿರಕ್ಕೂ ಹೆಚ್ಚಿನ ಮನೆಯನ್ನು ಕುದುರೆಮುಖ ಅದಿರು ಕಂಪೆನಿ ಹಾಗೂ ಸರ್ಕಾರ ಜಂಟಿಯಾಗಿ ಇಕೋ ಟೂರಿಸಂ ಕೇಂದ್ರ ಮಾಡುವ ಯೋಜನೆ ಹಮ್ಮಿಕೊಂಡಿದೆ. ಈ ವಿಚಾರವಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಯುತ್ತಿದ್ದು, ಸದ್ಯದಲ್ಲಿಯೇ ಈ ವಿಚಾರವಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕಾರ್ಯಗತ ಗೊಳಿಸುವುದಾಗಿ ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ 5 ಕೋಟಿ ಅನುದಾನದಲ್ಲಿ 2.5 ಕೋಟಿಯನ್ನು ಜಿಲ್ಲಾ ವ್ಯಾಪ್ತಿಯ ಪಂಚಾಯತಿಗಳ ಮೂಲಕ ಹಂಚಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಿ.ಎಲ್. ರಾಮದಾಸ್, ಕೆ.ಆರ್. ಪ್ರಭಾಕರ್ ಗೌಡ, ಎ.ವಿ. ಮಹಬಲೇಶ್ವರ ಶಾಸ್ತ್ರಿ, ಕೆ.ವಿ. ನರೇಂದ್ರ ಗೌಡ, ಟಿ.ಎಸ್. ಶ್ರೀನಿವಾಸ್, ಎನ್.ಎಂ. ಹರ್ಷ,ಅನಿಲ್ ಗೇವಿನ್, ದೇವದಾಸ್ ಗೌಡ ಸೇರಿದಂತೆ ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement