ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸುವೆ: ಶ್ರೀನಿವಾಸ್
ತರೀಕೆರೆ: ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಸಮೀಪದ ರಂಗೇನಹಳ್ಳಿ ಜಾಮಾ ಮಸೀದಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಮಾತನಾ, ಎಲ್ಲರ ಸಹಕಾರ ಪಡೆದು ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಾಮಾ ಮಸೀದಿ ಅಧ್ಯಕ್ಷ ಎ.ಜಿ. ಸಿರಾಜ್ ಆಹಮದ್ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಪುಷ್ಪಾಹಾರ ಹಾಕಿ ಅಭಿನಂದಿಸಿದರು.
ಜಿಪಂ ಸದಸ್ಯ ಕೆ.ಪಿ. ಕುಮಾರ್, ಮುಡುಗೋಡು ಗ್ರಾಪಂ ಅಧ್ಯಕ್ಷ ಟಿ.ಟಿ. ಗೋವಿಂದಪ್ಪ, ಎಚ್.ಎನ್. ಮಂಜುನಾಥ್, ಜಹೀರ್ ಅಹಮದ್, ಗಯಾಸ್ ಬೇಗ್,
ಅಮ್ಜದ್ ಖಾನ್ ಇದ್ದರು.