ಕಾಯ್ದೆ ಹಿಂತೆಗೆದುಕೊಳ್ಳುವ ಹೇಳಿಕೆ ವಿಷಾದನೀಯ
ತರೀಕೆರೆ: ಮುಖ್ಯಮಂತ್ರಿಗಳು ಹಿಂದಿನ ಸರ್ಕಾರದ ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್ ತಿಳಿಸಿದ್ದಾರೆ.
ಅದೇ ರೀತಿ ಆರ್ಎಸ್ಎಸ್ ಮತ್ತು ಭಜರಂಗದಳದ ಕಾರ್ಯಕರ್ತರನ್ನು ಮಾರೆಲ್ ಪೊಲೀಸ್ ಎಂದು ಕರೆಯುವ ಮೂಲಕ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜನರಿಗೆ ಅಗ್ಗದ ಮದ್ಯ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಯೋಜನೆ ರಾಜ್ಯದ ಜನರನ್ನು ದುಸ್ಥಿತಿಗೆ ತಳ್ಳುವುದರಲ್ಲಿ ಅನುಮಾನ ಇಲ್ಲ. ಇಂತಹ ಜನವಿರೋಧಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದೆಂದು ಅವರು ಆಗ್ರಹಿಸಿದ್ದಾರೆ.
ಜೈಲ್ ಭರೋ: ಕೇಂದ್ರ ಸರ್ಕಾರದ ಬ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ 27 ರಂದು ಬಿಜೆಪಿಯಿಂದ ಜೈಲ್ ಭರೋ ಚಳುವಳಿ ನೆಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.