ಕ್ರಿಕೆಟ್: ಬೆಂ. ಗ್ರಾ. ತಂಡಕ್ಕೆ ಬಹುಮಾನ
ಸಾಗರ: ಪಟ್ಟಣದ ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗುಡಿಗಾರ್ ಲೀಗಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡ (ಪ್ರಥಮ), ಶಿರಸಿ ಕ್ರಿಕೆಟ್ ತಂಡ (ದ್ವಿತೀಯ) ಬಹುಮಾನ ಪಡೆದುಕೊಂಡಿತು.
ಉಳಿದಂತೆ ಬೆಂಗಳೂರು ಗ್ರಾಮಾಂತರ ತಂಡದ ಸಾಗರ್ (ಪಂದ್ಯ ಪುರುಷೋತ್ತಮ), ಸಿರಸಿ ಕ್ರಿಕೆಟ್ ತಂಡದ ರೋಹಿತ್ (ಉತ್ತಮ ಬ್ಯಾಟ್ಸ್ಮನ್), ಬೆಂಗಳೂರು ಗ್ರಾಮಾಂತರ ತಂಡದ ರಾಘು (ಉತ್ತಮ ಬೌಲರ್), ಬೆಂಗಳೂರು ಗ್ರಾಮಾಂತರ ತಂಡದ ಪ್ರಜ್ವಲ್ (ಸರಣಿ ಶ್ರೇಷ್ಠ) ಹಾಗೂ ಬೊಂಬಾಯಿ ತಂಡವು ಉತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಮಾರೋಪದಲ್ಲಿ ಬಹುಮಾನ ವಿತರಿಸಿದ ಸಾಹಿತಿ ಡಾ. ನಾ. ಡಿಸೋಜ ಮಾತನಾಡಿದರು. ಲೋಕೇಶ ಕುಮಾರ್ ನಿರೂಪಿಸಿದರು.