ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಲಿತ ಸಂಘಟನೆಗಳ ಒಗ್ಗೂಡಿಸುವುದು ಅಗತ್ಯ

Rashmi Kasaragodu
Updated On : 23 May 2013, 11:20 am

ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 22
ಜನಾಂಗದ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕಾದ್ಯಾಂತ ಉಪ ಸಮಿತಿಗಳಾಗಿ ಹಂಚಿಹೋಗಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ ವ್ಯವಸ್ಥೆ ಆಗಬೇಕಾಗಿದೆಯೆಂದು ಜಿಲ್ಲಾ ಬಿ.ಎಸ್.ಪಿ. ಉಪಾಧ್ಯಕ್ಷರಾದ ಕೆ.ಎಂ. ಗೋಪಾಲ್ ಹೇಳಿದರು.
ತಾಲೂಕಿನ ಕಳಸ ಹೋಬಳಿಯ ಬಸರೀಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಜನಾಂಗದ ಪೂರ್ವಿಕರು ಮೇಲ್ವರ್ಗದವರಿಗೆ ನೆರಳು ಸೋಂಕಬಾರದೆನ್ನುವ ಉದ್ದೇಶದಿಂದ ಮಧ್ಯಾಹ್ನದ ವೇಳೆಯಲ್ಲಿ ಗಂಟೆ ಬಾರಿಸುತ್ತಾ ಬಂದು ಬೀದಿಗುಡಿಸುವ ಸಂಸ್ಕೃತಿಯಲ್ಲಿ ಬದಲಾವಣೆಯಾಗಿದೆ.
ಪ್ರಸಕ್ತ ಜನಾಂಗದ ಇತಿಹಾಸ ಪುರುಷರ ಸಮಕಾಲೀನ ಚಿಂತನೆಯಿಂದ ಸಂಘಟನೆಯಿಂದ ಶಿಕ್ಷಣ, ಆರ್ಥಿಕ ವ್ಯವಸ್ಥೆಯಿಂದ ಸ್ವಾವಲಂಬಿಗಳಾಗಿದ್ದರೂ, ರಾಜಕೀಯದಲ್ಲಿ ಜೀತದಾಳುಗಳಾಗಿದ್ದಾರೆ.
ಜನಾಂಗದ ಯುವಪೀಳಿಗೆ ವಿದ್ಯಾವಂತರಾಗಿ, ಶ್ರಮಜೀವಿಗಳಾಗಿ, ಆರ್ಥಿಕವಾಗಿ ಸದೃಢರಾದಲ್ಲಿ ಜನಾಂಗಕ್ಕೆ ಹಾಗೂ ಜನಾಂಗದ ರಾಜಕಾರಣಿಗಳಿಗೆ ಸಂದ ಗೌರವ ಎಂದು ತಿಳಿಸಿದರು.
ಬಸರೀಕಟ್ಟೆ ಶಾಖೆಯ ಅದ್ಯಕ್ಷ ನೇರಳೆಕಟ್ಟ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ, ತಾಲೂಕು ಸಂಚಾಲಕ ಪ್ರಭಾಕರ್,ಅಪ್ಪು, ಹೂವಯ್ಯ, ಬಾಬು, ಜಗದೀಶ್, ರವಿ, ಸುಮಲತಾ, ರಮ್ಯ, ಸುಮಿತ್ರ ಮುಂತಾದವರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement