ನಾಗಬ್ರಹ್ಮ ಪ್ರತಿಷ್ಠಾಪನೆ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಳ್ಳಿ ಗ್ರಾಮದ ಹೊಳೆಹೊದ್ದು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಗುರುವಾರ ನಾಗಬ್ರಹ್ಮ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕ್ರಿಯಾವಿಧಿಗಳು ನೆರವೇರಲಿದೆ. ಅಷ್ಟಬಂಧನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ- ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಎಎಫ್-11 ಫೀಡರ್‌ಗೆ ಸಂಬಂಧಿಸಿದಂತೆ ಪ್ರದೇಶಗಳಲ್ಲಿ 11 ಕೆವಿ ಮಾರ್ಗದ ತುರ್ತು ನಿರ್ವಹಣೆ ಕಾರ್ಯ ಇರುವ ಕಾರಣ ವಿದ್ಯುತ್ ಕಡಿತ ಅವಶ್ಯವಾಗಿದ್ದು, ಮೇ 23 ಹಾಗೂ 24ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯ ಹೊಸಮನೆ, ಶರಾವತಿ ನಗರ ಹಾಗೂ ವಿನೋಬ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹರ ಎಂಜಿನಿಯರ್ ಅವರು ತಿಳಿಸಿದ್ದಾರೆ.
ಉತ್ತಮ ಫಲಿತಾಂಶ
ಶಿವಮೊಗ್ಗ- ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ಪವನ್ ಎನ್‌ಜಿಪಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 610 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈತ ಸರ್ಕಾರಿ ನೌಕರರ ಸಹಕಾರ ಸಂಘದ ಕಾರ್ಯದರ್ಶಿ ಪ್ರಸನ್ನ ಎನ್‌ಜಿಪಿ ಅವರ ಪುತ್ರ.
ಉಚಿತ ತರಬೇತಿ
ಶಿವಮೊಗ್ಗ: ಶ್ರೀ ಜಗದ್ಗುರು ದಾರುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರವು 7, 8 ಹಾಗೂ 10ನೇ ತರಗತಿ ಪಾಸು ಅಥವಾ ಫೇಲಾದವರಿಗೆ ಕಂಪ್ಯೂಟರ್, ವೈರಿಂಗ್, ಸ್ಪೋಕನ್ ಇಂಗ್ಲೀಷ್, ಮೊಬೈಲಲ್ರಿಪೇರಿ, ಟೈಲರಿಂಗ್, ಎಂಬ್ರಾಯಿಡರಿ, ಅಕೌಂಟಿಂಗಗ್ವಿಷಯಗಳಲ್ಲಿ 3 ತಿಂಗಳ ಉಚಿತ ತರಬೇತಿ ಹಮ್ಮಿಕೊಂಡಿದೆ. ನಂತರ ಕೇಂದ್ರ ಸರ್ಕಾರ ಪ್ರಮಾಣಿತ ಪ್ರಮಾಣಪತ್ರ ನೀಡಲಾಗುವುದು. ತರಬೇತಿಯು ಜೂ.1ರಿಂದ ಆರಂಭ. ಸಂಪರ್ಕಿಸಿ- 08182 254296, 0141940723
ಮೂಲಿಕೆ ಔಷಧಿ
ಶಿವಮೊಗ್ಗ: ಅಸ್ತಮ, ಅಲರ್ಜಿ, ಕೆಮ್ಮು, ದಮ್ಮು ರೋಗಗಳಿಗೆ ಉಚಿತ ಮೂಲಿಕೆ ಸಿದ್ಧಔಷಧಿಯನ್ನು ಜೂ.8ರ ಬೆಳಿಗ್ಗೆ 5.35ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೃಗಶಿರ ಮಳೆ ನಕ್ಷತ್ರದ ಪ್ರಾರಂಭದಲ್ಲಿ ಕೊಡಲಾಗುವುದು. ಈ ಔಷಧಿಯನ್ನು ವರ್ಷಕ್ಕೆ ಒಮ್ಮೆ ಮಾತ್ರ ನೀಡಲಾಗುವುದು. ವಿವರಕ್ಕೆ ಸಂಪರ್ಕಿಸಿ- 9448238932, 9342238465.