ಬಿರುಕುಬಿಟ್ಟ ಸೇತುವೆ ತಡೆಗೋಡೆ
ತರೀಕೆರೆ: ಬಿ.ಎಚ್. ರಸ್ತೆಯ ಚಿಕ್ಕಕೆರೆ ಕೋಡಿ ಸೇತುವೆ ತಡೆಗೋಡೆ ಬಿರುಕು ಬಿಟ್ಟಿದ್ದು ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಡಚಣೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಾದ ಕಾರಣ ದಿನಪೂರ್ತಿ ಈ ರಸ್ತೆ ಧಟ್ಟ ವಾಹನ ಸಂಚಾರದಿಂದ ಕೂಡಿರುತ್ತದೆ. ಪ್ರಯಾಣಿಕರ ವಾಹನ, ಸರಕು ಸಾಗಾಣಿಕೆಯ ವಾಹನಗಳು ಹೆಚ್ಚಳ. ಸಂಬಂದಿಸಿದ ಇಲಾಖೆ ಕೂಡಲೆ ಗಮನ ಹರಿಸಿ ತಡೆಗೋಡೆ ದುರಸ್ತಿಗೊಳಿಸಬೇಕೆಂಬುದು ಅಭಿಪ್ರಾಯವಾಗಿದೆ.