ಭದ್ರಾ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಆಗ್ರಹ
ದಾವಣಗೆರೆ ದೊಡ್ಡಬಾತಿ ಗ್ರಾಮದ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ಹರಿಹರ ಶಾಸಕ, ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಶಂಕರ ಮುಂದೆ ಬಂದಲ್ಲಿ, ಎಲ್ಲಾ ರೀತಿ ಸಹಕಾರ ನೀಡುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಪುನಾರಂಭಿಸಲು ಶಾಸಕ ಶಿವಶಂಕರ್ ಮುಂದೆ ಬಂದಲ್ಲಿ ಸಹಕಾರ ನೀಡಲು ಸಿದ್ಧ ಎಂದರು.