'ಮಣ್ಣಿನ ಸತ್ವದ ಬಗ್ಗೆ ಪರೀಕ್ಷೆ ಮುಖ್ಯ'
ಚಳ್ಳಕೆರೆ: ರೈತರು ಬೀಜ ಗೊಬ್ಬರ ಸಮರ್ಪಕವಾಗಿ ಹಾಕುವ ಜೊತೆಗೆ ಬೆಳೆ ಬೆಳೆಯುವ ಮಣ್ಣಿನ ಸತ್ವದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಹಾಯಕ ಕೃಷಿ ಅಧಿಕಾರಿ ಡಾ.ಜಿ.ಸಿ. ಸುಜಾತ ತಿಳಿಸಿದ್ದಾರೆ.
ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಮಣ್ಣು ಮಾದರಿ ಸಂಗ್ರಹಣ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾನ್ಯ ಕೃಷಿ ಭೂಮಿಯನ್ನು 3 ವರ್ಷಕ್ಕೊಮ್ಮೆ ಮತ್ತು ತೀವ್ರ ಕೃಷಿಯಲ್ಲಿರುವ ಭೂಮಿಯನ್ನು ಪ್ರತಿವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಉತ್ತಮ ಸಸ್ಯಗಳ ಪೋಷಕಾಂಶಗಳ ಅಗತ್ಯಕ್ಕೆ ತಕ್ಕಂತೆ ಉತ್ತಮ ಮಣ್ಣು ಲಭಿಸಿದಲ್ಲಿ ಬೆಳೆಯ ಗುಣಮಟ್ಟ ಚನ್ನಾಗಿರುತ್ತದೆ.
ಮಣ್ಣಿನಲ್ಲಿ ಗುಣಮಟ್ಟಗಳು ಕಡಿಮೆಯಾದರೆ ಬೆಳೆ ಕಳಪೆಯಾಗುತ್ತದೆ. ರೈತರು ತಮ್ಮ ಹೊಲಗಳ ಮಣ್ಣಿನ ಮಾದರಿಯನ್ನು ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು.