ರಾ.ಹೆ.ಯಲ್ಲಿ ಅಪಘಾತ: ವ್ಯಕ್ತಿ ಸಾವು
ಕ.ಪ್ರ.ವಾರ್ತೆ ಟಿ ತರೀಕರೆ ಟಿ ಮೇ 22
ಕಳೆದ ವಾರ ಸಂಭವಿಸಿದ ಎರಡು ಅಪಘಾತ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗಲೇ ಮತ್ತೆ ಬುಧವಾರ ಬೆಳಿಗ್ಗೆ 10-15ರಲ್ಲಿ ಪಟ್ಟಣದ ರಾ.ಹೆ.ಯಲ್ಲಿ ತರೀಕೆರೆಯಿಂದ ತೆರಳುತ್ತಿದ್ದ
ಬೈಕ್ ಮತ್ತು ಚಿಕ್ಕಮಗಳೂರಿನಿಂದ ಗಂಗಾವತಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಮತ್ತೊಬ್ಬರಿಗೆ ಗಾಯಗಳಾಗಿದೆ.
ಮೋಟಾರ್ ಬೈಕ್ನಲ್ಲಿ ತೆರಳುತ್ತಿದ್ದ ತರೀಕೆರೆಯ ಅಬಿಲಾಶ್ (19) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬೈಕ್ ಹಿಂದೆ ಕುಳಿತಿದ್ದ ರಾಘು ಎನ್ನುವವರಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.