ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

78,828 ಮನೆಗಳಲ್ಲಿ ಶೌಚಾಲಯಗಳಿಲ್ಲ...

Rashmi Kasaragodu
Updated On : 24 May 2013, 11:18 am

ಆರ್.ತಾರಾನಾಥ್
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರುಟಿ  ಮೇ 23
ಜಿಲ್ಲೆಯಲ್ಲಿ ನೈರ್ಮಲ್ಯ ಆಂದೋಲನ ಜಾರಿಗೆ ಬಂದು 7 ವರ್ಷ ಕಳೆದರೂ ಶೇ. 100 ರಷ್ಟು ಪ್ರಗತಿ ಸಾಧಿಸಲು ಈವರೆಗೆ ಸಾಧ್ಯವಾಗಿಲ್ಲ.
ಶೌಚಾಲಯಗಳಿಲ್ಲದ ಮನೆಗಳ ಸಂಖ್ಯೆ  ಬರೋಬರಿ 78,828.
ಕಡೂರು ತಾಲೂಕಿನಲ್ಲಿ 32,339, ತರೀಕೆರೆ ತಾಲೂಕಿನಲ್ಲಿ 19,811 ಮನೆಗಳಲ್ಲಿ ಶೌಚಾಲಯಗಳಿಲ್ಲ. ಈ ಕುಟುಂಬಗಳು ಮಲ ವಿಸರ್ಜನೆಗೆ ಇನ್ನೂ ಬಯಲನ್ನೇ ಅವಲಂಬಿಸಿವೆ.
ಶೇ. 62.76 ಪ್ರಗತಿ: ಜಿಲ್ಲೆಯಲ್ಲಿರುವ ಒಟ್ಟು  2,11,153 ಮನೆಗಳ ಪೈಕಿ 78,828 ಮನೆಗಳಲ್ಲಿ ಶೌಚಾಲಯಗಳಿಲ್ಲ. ಅಂದರೆ, ಈವರೆಗೆ ಶೇ. 62.76 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇನ್ನು  ಶೇ. 37.33 ರಷ್ಟು ಪ್ರಗತಿ  ಸಾಧಿಸಬೇಕಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೌಚಾಲಯ ನಿರ್ಮಾಣಕ್ಕೆ ಉತ್ತೇಜನ ನೀಡಲು ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ನಿರ್ಮಲ ಗ್ರಾಮ ಪುರಸ್ಕಾರದಂತಹ ರಾಷ್ಟ್ರ ಪ್ರಶಸ್ತಿ ನೀಡುವ ಜತೆಗೆ ಸಹಾಯಧನವನ್ನು ಸಹ ನೀಡುತ್ತಿದೆ. ಆದರೆ, ಪ್ರಗತಿ ನಿರೀಕ್ಷಿತ  ಮಟ್ಟದಲ್ಲಿ ಆಗುತ್ತಿಲ್ಲ.
ಇಲ್ಲಿನ ಶೇ. 88.44 ಅಂಗನವಾಡಿ ಕೇಂದ್ರಗಳು ಶೌಚಾಲಯಗಳನ್ನು ಹೊಂದಿದ್ದು, ಈ ಪೈಕಿ ಶೇ. 80.62 ಕೇಂದ್ರಗಳು ಸಮರ್ಪಕವಾಗಿವೆ.
ಶೇ. 1.47 ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಹಾಲಿ ಇರುವ ಶೌಚಾಲಯಗಳ ಪೈಕಿ ಶೇ. 8.16 ರಷ್ಟು ಶೌಚಾಲಯಗಳಿಗೆ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ. ಶೇ. 2.79 ಖಾಸಗಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ.
ಬಯಲುಸೀಮೆ: ಜಿಲ್ಲೆಯ ಹಿಂದುಳಿದ ತಾಲೂಕುಗಳಾದ ಕಡೂರು ಹಾಗೂ ತರೀಕೆರೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದರೂ ಸಹ ಅಲ್ಲಿನ ಜನರು ಸ್ಪಂದಿಸಿಲ್ಲ ಎಂಬುದು ಪ್ರಗತಿಯ ಅಂಕಿ ಅಂಶಗಳೇ ಹೇಳುತ್ತಿವೆ.
ಆದರೆ, ಮಲೆನಾಡಿನ ತಾಲೂಕುಗಳಲ್ಲಿ ಅದರಲ್ಲೂ ಎನ್.ಆರ್.ಪುರ  ಮತ್ತು ಶೃಂಗೇರಿ ತಾಲೂಕುಗಳಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲಾಗಿದೆ.
ನೈರ್ಮಲ್ಯ ಆಂದೋಲನ ಚಿಕ್ಕಮಗಳೂರು ಜಿಲ್ಲೆಯಲ್ಲಿ 2005ರ ಅಕ್ಟೋಬರ್ ತಿಂಗಳಲ್ಲಿ ಜಾರಿಗೆ ಬಂದಿತು. ಆಗ ಶೌಚಾಲಯ ನಿರ್ಮಾಣಕ್ಕೆ ಕೊಡುತ್ತಿದ್ದ ಹಣ ಅತ್ಯಲ್ಪವಾಗಿತ್ತು. ಈಗ ಪ್ರೋತ್ಸಾಹ ಧನವಾಗಿ ನಿರ್ಮಲ ಭಾರತ ಅಭಿಯಾನದಡಿಯಲ್ಲಿ 4700 ರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 4500 ರು. ಒಟ್ಟು 9200 ರುಪಾಯಿ ಒಂದು  ಶೌಚಾಲಯ ನಿರ್ಮಾಣಕ್ಕೆ ನೀಡಲಾಗುತ್ತಿದೆ. ಆದರೂ ಕೂಡ ಜನರು ಶೌಚಾಲಯ  ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ.
ಪುರಸ್ಕಾರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ 65 ಗ್ರಾಮ ಪಂಚಾಯ್ತಿಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಸಿಕ್ಕಿದೆ.
ಇವುಗಳಲ್ಲಿ 59 ಗ್ರಾಮ ಪಂಚಾಯ್ತಿಗಳನ್ನು ಹೊಂದಿರುವ ಕಡೂರು ತಾಲೂಕಿನಲ್ಲಿ ಒಂದು ಪಂಚಾಯ್ತಿಗೆ ಮಾತ್ರ ಈ ಪ್ರಶಸ್ತಿ ಬಂದಿದೆ. ತರೀಕೆರೆಯ 46 ಪಂಚಾಯ್ತಿಗಳ ಪೈಕಿ 6, ಚಿಕ್ಕಮಗಳೂರು
ತಾಲೂಕಿನ 47 ಪಂಚಾಯ್ತಿಗಳಲ್ಲಿ 15, ಮೂಡಿಗೆರೆ- 29ರಲ್ಲಿ 11, ಕೊಪ್ಪ- 22ರಲ್ಲಿ  9, ಇನ್ನುಳಿದಂತೆ ಎನ್.ಆರ್.ಪುರ ತಾಲೂಕಿನ 14 ಪಂಚಾಯ್ತಿ ಹಾಗೂ ಶೃಂಗೇರಿಯಲ್ಲಿರುವ 9 ಪಂಚಾಯ್ತಿಗಳಿಗೆ ಈ ಪ್ರಶಸ್ತಿ ಬಂದಿದೆ.

ತಾಲೂಕು          ಶೌಚಾಲಯ ರಹಿತ ಶೇ.

ಚಿಕ್ಕಮಗಳೂರು     35.93
ಕಡೂರು     57.94
ಕೊಪ್ಪ     6.84
ಮೂಡಿಗೆರೆ     28.06
ಎನ್.ಆರ್.ಪುರ      11.91
ಶೃಂಗೇರಿ     7.91
ತರೀಕೆರೆ     47.13

ತಾಲೂಕು          ಶೌಚಾಲಯ ಪಡೆದ ಶೇ.


ಚಿಕ್ಕಮಗಳೂರು     15
ಕಡೂರು     1
ಕೊಪ್ಪ     9
ಮೂಡಿಗೆರೆ    11
ಎನ್.ಆರ್.ಪುರ     14
ಶೃಂಗೇರಿ     9
ತರೀಕೆರೆ     6

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement