ನಾಗಬ್ರಹ್ಮ ಪ್ರತಿಷ್ಠಾ ಮಹೋತ್ಸವ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಳ್ಳಿ ಗ್ರಾಮದ ಹೊಳೆಹೊದ್ದು ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಗುರುವಾರ ನಾಗಬ್ರಹ್ಮ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕ್ರಿಯಾವಿಧಿಗಳು ನೆರವೇರಿತು. ಅಷ್ಟಬಂಧ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ತರೀಕೆರೆ ಬಳಿ ಮಹಿಳೆ ಕೊಲೆ
ತರೀಕೆರೆ: ಹಳೆಯೂರು ರೈಲ್ವೆ ಟ್ರ್ಯಾಕ್ ಸಮಿಪ ಮಹಿಳೆಯೋರ್ವರ ಕತ್ತು ಕುಯ್ದು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ,. ಕೊಲೆಯಾದ ಮಹಿಳೆಯನ್ನು ಪಟ್ಟಣದ ಸುಂದರೇಶ್ ಬಡಾವಣೆಯ ಲಕ್ಷ್ಮಿ ಅಲಿಯಾಸ್ ದೇವಿಬಾಯಿ (35) ಎಂದು ಪೊಲೀಸರು ಗುರುತಿಸಿದ್ದು, ರೈಲ್ವೆ ಮತ್ತು ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.