ಪಾರದರ್ಶಕ ಆಡಳಿತ ನಡೆಸಲು ಸಲಹೆ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಮೇ 23
ಸಹಕಾರ ಸಂಘಗಳು ಪಾರದರ್ಶಕ ಅಡಳಿತ ನೆಡೆಸಬೇಕೆಂದು ಹಂಪೆ ಹೇಮಕೂಟ ಗಾಯಿತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಬನಶಂಕರಿ ಪತ್ತಿನ ಸಹಕಾರ ಸಂಘದ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾರದರ್ಶಕ ಅಡಳಿತ ನೆಡೆಸುವುದರಿಂದ ಸಹಕಾರ ಸಂಘಗಳ ಪ್ರಗತಿ ಸಾಧ್ಯ, ನಿಗಧಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ, ಆದರಿಂದ ಇತರರೂ ಸಂಘದಿಂದ
ಅರ್ಥಿಕ ನೆರವು ಪಡೆಯಬಹುದು, ರಾಜ್ಯದ ಹಲವೆಡೆ ಸಮಾಜದ ಅನೇಕ ಸಹಕಾರ ಸಂಘಗಳು ಜನರಿಗೆ ಉತ್ತಮ ಸೇವೆ ನೀಡಿ ಯಶಸ್ವಿಯಾಗಿವೆ ಎಂದು ತಿಳಿಸಿದರು.
ಸೇವೆಯೇ ಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಹಕಾರ ಸಂಘಗಳ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ತನ್ನನ್ನು ಗೆಲ್ಲಿಸಿದ ಮತದಾರರಿಗೆ ಅವರು ಕೃತಜ್ಞತೆ ಅರ್ಪಿಸಿದರು.
ಸಾಮಾಜಿಕ ನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಬನಶಂಕರಿ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಭಾಗ್ಯ ಚಂದ್ರಶೇಖರ್ ಭದ್ರತಾ ಕೊಠಡಿ ಉದ್ಘಾಟನೆ ನರವೇರಿಸಿ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘ ಬೆಳೆಯಲು ಕಾರಣವಾಗುತ್ತದೆ. ಸಂಘದ ಅಧ್ಯಕ್ಷ ಬಿ.ಎಸ್. ನಾಗರಾಜ್ ಮತ್ತು ಅಡಳಿತ ಮಂಡಳಿ ಉತ್ತಮ ಸೇವ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ಎಸ್. ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಪ್ರಗತಿಗೆ ಕಾರಣರಾದವರೆಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಟಿ.ಆರ್. ನಾಗರಾಜ್, ಮಲೆನಾಡು ದೇವಾಂಗ ಸಂಘದ ಕಾರ್ಯದರ್ಶಿ ಪಿ. ಗಿರಿಯಪ್ಪ, ಕರಕುಚ್ಚಿ ಲಕ್ಷ್ಮಣ್, ಎಸ್. ಶಿವಾನಂದ್ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್, ಟಿ.ಆರ್. ಶ್ರೀಧರ್, ರಾಜೇಶ್, ರಮೇಶ್, ಶಿವಕುಮಾರ್, ಕೃಷ್ಣಮೂರ್ತಿ, ಸಿ.ನಾಗರಾಜ್, ಸಂಘದ ಸದಸ್ಯರು ಇದ್ದರು.