ಸನ್ಮಾನ ಸಾಧನೆಗೆ ಉತ್ತೇಜಕ
ಜೋಗ್ಫಾಲ್ಸ್: ಸಾಮಾನ್ಯರ ನಡುವೆ ಇರುವಂತಹ ಸಾಧಕರನುಢಿ ಹುಡುಕಿ ಸನ್ಮಾನಿಸುವುದರಿಂದ ಸಾಮಾನ್ಯರೂ ಅಸಾಮಾನ್ಯರಾಗಿ ಗುರುತಿಸಲ್ಪಡುತ್ತಾರೆ. ಅಲ್ಲದೇ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸುವ ಹಂಬಲ ಹೆಚ್ಚಿಸಲೂ ಇದು ಉತ್ತಮ ಮಾರ್ಗವಾಗಿದೆ ಎಂದು ಹಳ್ಳಿಮನೆ ಉತ್ಸವದ ಸಂಸ್ಥಾಪಕ ಶ್ರೀಕಾಂತ್ ಕರೆಕೈ ತಿಳಿಸಿದರು.
ಅವರು ಸಮೀಪದ ತಲವಾಟದಲ್ಲಿ ಹಳ್ಳಿಮನೆ ಉತ್ಸವದ ಅಂಗವಾಗಿ ಕಮಲೇಶರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲೆಮರೆ ಕಾಯಿ: ಕೆಲವು ಸಾಧಕರು ಎಲೆಮರೆಯ ಕಾಯಿಯಂತೆ ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಾ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನಿಸ್ವಾರ್ಥ ಸೇವೆಯಿಂದ ಸಲ್ಲಿಸುತ್ತಿರುತ್ತಾರೆ. ಅಂತಹ ಪ್ರತಿಭೆಗಳಲ್ಲಿ ಕಮಲೇಶರೂ ಒಬ್ಬರಾಗಿದ್ದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಯಕ್ಷಗಾನ, ಬಾಣಸಿಗ, ಪೌರೋಹಿತ್ಯ ಹಾಗೂ ಸಮಾಜ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡದ ಮುಖ್ಯಸ್ಥ ವಿದ್ವಾನ್ ದತ್ತಮೂರ್ತಿ, ಕೊಳಗಿ ಕೇಶವ ಹೆಗಡೆ, ಅರುಣಣ್ಗೋಟಗಾರು ಮತ್ತಿತರರು ಹಾಜರಿದ್ದರು.