ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಮಾರಗಿರಿಯಲ್ಲಿ ವೈಕಾಶಿ ವಿಶಾಖ ಉತ್ಸವ

Lingaraj Badiger
Updated On : 25 May 2013, 11:00 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 24
ತಮಿಳು ಜನಾಂಗದ ಆರಾಧ್ಯ ದೈವ ಶ್ರೀ ಸುಬ್ರಹ್ಮಣ್ಯಸ್ವಾಮಿ ಆವತರಿಸಿದ ದಿನವಾದ ಶುಕ್ರವಾರ ತಾಲೂಕಿನ ಕುಮಾರಗಿರಿಯಲ್ಲಿ ವೈಕಾಶಿ ವಿಶಾಖ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಉತ್ಸವದ ಅಂಗವಾಗಿ ನಸುಕಿನಲ್ಲಿ ನಗರದ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ತೆರಳಿದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ತಮಿಳು ಜನಾಂಗದ ಭಕ್ತರು ಕಳಶಗಳಲ್ಲಿ ಹಾಲನ್ನು ತುಂಬಿ ಪೂಜೆ ಸಲ್ಲಿಸಿದರು.
ನಂತರ ಹಾಲು ತುಂಬಿದ ಕಳಶಗಳನ್ನು ತಲೆಯ ಮೇಲೆ ಹೊತ್ತು ಮಂಗಳವಾದ್ಯಗಳು ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವಮೂರ್ತಿಯೊಂದಿಗೆ ಬರಿಗಾಲಲ್ಲಿ ಹಳೇ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿಂದ ವಾಹನಗಳಲ್ಲಿ ಕುಮಾರಗಿರಿಗೆ ತೆರಳಿದರು.
ಭಕ್ತರು ಹೊತ್ತು ತಂದ ಕಳಶಗಳ ಹಾಲಿನಿಂದ ಕುಮಾರಗಿರಿಯಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ, ವಿಶೇಷಪೂಜೆ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಎ. ಚಿನ್ನಸ್ವಾಮಿ, ಉಪಾಧ್ಯಕ್ಷ ಜಿ. ರಮೇಶ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾಧ್ಯಕ್ಷ ಬಿ. ವರದರಾಜು, ಶ್ರೀ ಸುಬ್ರಹ್ಮಣ್ಯ ಭಾರತೀ ಮಹಾಸಭಾದ ಅಧ್ಯಕ್ಷ ವಿ. ಆರ್ಮುಗಂ, ಖಜಾಂಚಿ ಶಕ್ತಿವೇಲ್, ಗುಣಶೇಖರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement