ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಸಿಲ ತಾಪಕ್ಕೆ ಬಸವಳಿದ ಜನತೆ

Lingaraj Badiger
Updated On : 25 May 2013, 10:59 am

ಕ.ಪ್ರ.ವಾರ್ತೆ, ಬೀರೂರು, ಮೇ 24
 ಬರಗಾಲದ ಹಣೆಪಟ್ಟಿಯಿಂದ ತತ್ತರಿಸಿರುವ ಜಿಲ್ಲೆಯ ಬಯಲು ಪ್ರದೇಶದ ಜಳಕ್ಕೆ ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ಒಂದೆಡೆಯಾದರೆ ಈ ಭಾರಿ ಬಿಸಿಲಿನ ಜಳಕ್ಕೆ ನಾಗರೀಕರು ತತ್ತರಿಸಿದ್ದಾರೆ.                                
 ಬೆಳಿಗ್ಗೆ  9 ರಿಂದ ಸಂಜೆ 6 ಗಂಟೆವರೆಗೆ ಮನೆ ಬಿಟ್ಟು ಹೊರಡಲಾರದ ಸ್ಥಿತಿ ಇದ್ದು ವಿದ್ಯುತ್ ವ್ಯತ್ಯಯದಿಂದಾಗಿ ಫ್ಯಾನ್‌ಗಳು ತಿರುಗದೆ ವೃದ್ದರು ಅನಾರೋಗ್ಯ ಪೀಡಿತರು ಜೀವ ಬಿಗಿ ಹಿಡಿದುಕೊಂಡು ಸೂರ್ಯನ ತಾಪಕ್ಕೆ ನಲುಗಿದ್ದಾರೆ. ಊರಿನ ಎಲ್ಲ ಬಡಾವಣೆಗಳಲ್ಲಿಯೂ ನೀರಿನ ಹಾಹಾಕಾರ ಉಂಟಾಗಿದ್ದು, ಬಿಂದಿಗಗಳದ್ದೇ ಕಾರುಬಾರು ಕಂಡು ಬರುತ್ತಿದೆ.
ನೀರಿಗೆ ತತ್ವಾರ: ಪಟ್ಟಣದಲ್ಲಿ ರು. 450 ಕೊಟ್ಟರೂ ಕೂಡ ಸಹ ಟ್ಯಾಂಕರ್‌ಗಳಿಂದ ನೀರಿನ ಪೂರೈಕೆ ನಿಗಧಿತ ಸಮಯಕ್ಕೆ ಸಿಗುತ್ತಿಲ್ಲ.  400 ರಿಂದ 500 ಅಡಿಗಳಷ್ಟು ಕೊಳವೆಬಾವಿ ತೋಡಿದರೂ ಒಂದು ಇಂಚು ನೀರು ಲಭ್ಯವಾಗುತ್ತಿಲ್ಲ. ಪುರಸಭೆ ಕೊರೆಸಿದ ಬೋರ್‌ವೆಲ್‌ಗಳು ವಿಫಲವಾಗಿವೆ. ಜೊತೆಗೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಲ್ದಾಣ,  ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ.
 ಕಳೆದ ಐದಾರು ತಿಂಗಳಿನಿಂದ ಕುಡಿಯುವ ನೀರು ಕಲ್ಪಿಸುವಂತೆ ಪುರಸಭೆಗೆ ಮಾಡಿದ ಯಾವುದೇ ಮನವಿಗಳು ಪ್ರಯೋಜನಕ್ಕೆ ಬರುತ್ತಿಲ್ಲ. ನಾಗರಿಕರು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಜನರು  ಆತಂಕಕ್ಕೆ ಒಳಗಾಗಿದ್ದಾರೆ.                                                             
ಬಿಸಿಲ ತಾಪ: ಈ ನಡುವೆ ವಿಧಾನಸಭೆಗೆ ಚುನಾವಣೆ ನಡೆದಿರುವುದರಿಂದ ಬಿಸಿಲಿನ ಜಳಕ್ಕೆ ಈ ನಡುವೆ ವಿಧಾನಸಭಾ ಚುನಾವಣೆ ನಡೆದಿರುವುದು ಬಿಸಿಲಿನ ಕಾವಿನ ಜೊತೆ ಚುನಾವಣಾ ಕಾವನ್ನು ಮಾತ್ರ ಹೆಚ್ಚಿಸಿತು.   ನೀರಿನ ಬಗ್ಗೆ ಮಾತ್ರ ಚಿಂತಿಸುತ್ತಿರುವ ಜನರು ಮಳೆ ಬೆಳೆ ಇಲ್ಲದೆ ಸಾರ್ವಜನಿಕರು ಒದ್ದಾಡುತ್ತಿದ್ದು ಶೀಘ್ರವೇ ಮಳೆ ಬಂದು ಎಲ್ಲ ಕಷ್ಟಗಳು ನಿವಾರಣೆಯಾಗಲೆಂದು ನಾಗರೀಕರು ವರುಣ ದೇವನನ್ನು ಪ್ರಾರ್ಥಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement