ಮಹಿಳಾ ಮಂಡಳಿಗೆ ಸೂಚನೆ
ಚಿಕ್ಕಮಗಳೂರು: ಜಿಲ್ಲಾ ನೋಂದಾವಣಾ ಅಧಿಕಾರಿಗಳ ಕಚೇರಿಯಲ್ಲಿ 2013ರ ಜನವರಿ 1ರಿಂದ ಏಪ್ರಿಲ್ 30 ರೊಳಗೆ ನೋಂದಾಯಿತವಾಗಿರುವ, ನೆಹರು ಯುವ ಕೇಂದ್ರಕ್ಕೆ ಸಂಯೋಜನೆಗೊಳ್ಳದಿರುವ ಯುವಕ ಸಂಘ ಮಂಡಳಿಗಳು ಕೂಡಲೇ ನೆಹರು ಯುವ ಕೇಂದ್ರದಲ್ಲಿ ತಮ್ಮ ಸಂಘ/ಮಹಿಳಾ ಮಂಡಳಿಗಳನ್ನು ಸಂಯೋಜನೆಕೊಳ್ಳಲು ಕೋರಲಾಗಿದೆ. ಕೇಂದ್ರ ಸರ್ಕಾರವು ಭಾರತಾದ್ಯಂತ ಎಲ್ಲಾ ಸಂಘ ಮಂಡಳಿಗಳನ್ನು ಆನ್‌ಲೈನ್ ವ್ಯವಸ್ಥೆ ಮೂಲಕ ಕ್ರೋಡೀಕರಿಸಿ ಅವುಗಳಿಗೆ ನೇರವಾಗಿ ಕಾರ್ಯಕ್ರಮಗಳನ್ನು ನೀಡಲು ಹಾಗೂ ಫಲಾನುಭವಿಗಳನ್ನಾಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಮೇಲ್ಕಂಡ ಅವಧಿಯಲ್ಲಿ ನೋಂದಾಯಿತವಾಗಿರುವ ಸಂಘ ಮಂಡಳಿಗಳು ಜಿಲ್ಲಾ ನೋಂದಾವಣಾಧಿಕಾರಿಗಳ ಕಚೇರಿಯಲ್ಲಿ ನೀಡಿರುವ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಹಾಗೂ ಸಂಘ ಮಂಡಳಿಯ ಮೊಹರುನೊಡನೆ ಜಿಲ್ಲಾ ನೆಹರು ಯುವ ಕೇಂದ್ರಕ್ಕೆ ಬಂದು ಅರ್ಜಿ ನಮೂನೆ ಪಡೆದು ಸಂಯೋಜನೆಗೊಳಿಸಿ, ಸಂಯೋಜನಾ ಪತ್ರ ಪಡೆಯಲು ಕೋರಲಾಗಿದೆ.