ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈದ್ಯಾಧಿಕಾರಿ ಮನೆ ಮೇಲೆ ಲೋಕಾ ದಾಳಿ

Lingaraj Badiger
Updated On : 25 May 2013, 11:06 am

ಕ.ಪ್ರ.ವಾರ್ತೆ ಕೊಪ್ಪ  ಮೇ 24
ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎನ್.ಆರ್. ರಾಮಚಂದ್ರಪ್ಪ ಅವರ ಮನೆ ಮತ್ತು ತೋಟದ ಮನೆಯ ಮೇಲೆ ಏಕಕಾಲದಲ್ಲಿ  ಶುಕ್ರವಾರ ನಸುಕಿನಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಅಕ್ರಮ ಅಸ್ತಿ ಹೊಂದಿರುವ ದಾಖಲೆ ವಶಪಡಿಸಿಕೊಂಡಿದ್ದಾರೆ.
ಹಲವು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಲೋಕಾಯುಕ್ತ ಪೊಲೀಸರು   ಜಂಟಿ ಕಾರ್ಯಚಾರಣೆ ಮಾಡಿದ್ದು, ಕೊಪ್ಪದಲ್ಲಿರುವ ಡಾ.ಎನ್.ಆರ್. ರಾಮಚಂದ್ರಪ್ಪ ರವರ ವಾಸದ ಮನೆ ಮತ್ತು ಎನ್.ಆರ್.ಪುರ ಬಳಿ ಇರುವ ತೋಟದ ಮನೆಗಳ ಮೇಲೆ ದಾಳಿ ನಡಿಸಿದ ಸಂದರ್ಭದಲ್ಲಿ ರು. 1.70 ಕೋಟಿಗೂ ಹೆಚ್ಚು ಅಕ್ರಮ ಅಸ್ತಿ ಸಂಪಾದನೆ ಮಾಡಿರುವುದು ಬೆಳೆಕಿಗೆ ಬಂದಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ. ರಾಜು ತಿಳಿಸಿದ್ದಾರೆ.
ಕಾಫಿ, ಅಡಕೆ ತೋಟ: ಕೊಪ್ಪ ತಾಲೂಕಿನ ಜಯಪುರ ಬಳಿಯಲ್ಲಿ 9 ಎಕರೆ ಕಾಫಿ ಮತ್ತು ಅಡಕೆ ತೋಟವನ್ನು ರು. 7 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿದ್ದಾರೆ. ಕೊಪ್ಪ ಪಟ್ಟಣದಲ್ಲಿ 100್ಢ40 ವಿಸ್ತೀರ್ಣದ 2 ಸೈಟುಗಳನ್ನು ತಲಾ ರು. 4 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿದ್ದಾರೆ, ಶಿವಮೊಗ್ಗದ ಅಲ್ಹರಿಮಾನನ್ ನಗರದಲ್ಲಿ 60್ಢ40 ದಲ್ಲಿ ಸೈಟುಗಳನ್ನು   ಪತ್ನಿ ಬಿ.ಎಸ್. ಚೇತನಾ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ.
ಬೆಂಗಳೂರಿನ ಸೂರ್ಯ ನಗರದ ಕೆ.ಎಚ್.ಬಿ.ಯಲ್ಲಿ ರು. 15 ಲಕ್ಷದ ಸೈಟ್ ಹಾಗೂ ಕೊಣದ ಕುಂಟೆಯಲ್ಲಿ ರು. 26 ಲಕ್ಷ ಮೌಲ್ಯದ ಸೈಟುಗಳು ಇವರ ಹೆಸರಿನಲ್ಲಿದೆ. ಮೈಸೂರಿನ ಕಾರಳಬೆಟ್ಟುವಿನಲ್ಲಿ ಇವರ ಮತ್ತು ಮಗ ಚಿರಾಗ್‌ನವರ ಜಂಟಿ ಹೆಸರಿನಲ್ಲಿ ರು. 15 ಲಕ್ಷ ಮೌಲ್ಯದ ಮನೆ ಇದೆ. ಇವರ ಪತ್ನಿ ಹೆಸರಿನಲ್ಲಿ ಕಟ್ಟಡವನ್ನು ಲೀಸ್ ಹಾಕಿಕೊಂಡು ಖಾಸಗಿಯಾಗಿ ನರ್ಸಿಂಗ್ ಹೋಮ್ ನಡೆಸುತ್ತಿದ್ದಾರೆ.
2012 ರ ಡಿಸೆಂಬರ್‌ನಲ್ಲಿ ಎನ್.ಆರ್.ಪುರ ತಾಲೂಕು ಖಾಂಡ್ಯದಲ್ಲಿ ರು. 1 ಕೋಟಿ ಗೆ 15 ಎಕರೆ ಕಾಫಿ ಎಸ್ಟೇಟ್ ಮತ್ತು ಇವರ ಸೋದರ ಮಿಥುನ್ ಹೆಸರಲ್ಲಿ ಖರೀದಿ ಮಾಡಿದ್ದಾರೆ. ಇವರ ಮನೆಯಲ್ಲಿ ರು. 55,000 130 ಗ್ರಾಂ ಚಿನ್ನ, 425 ಗ್ರಾಂ ಬೆಳ್ಳಿ ಹಾಗೂ ಕೊಪ್ಪ ಎಸ್.ಬಿ.ಎಂ. ಬ್ಯಾಂಕ್ ಲಾಕರ್‌ನಲ್ಲಿ 334 ಗ್ರಾಂ ಚಿನ್ನಾಭರಣಗಳು ಲಭ್ಯವಾಗಿದೆ.
1 ಮಹೇಂದ್ರ ಜೀಪ್, 1 ಇಂಡಿಗೋ ಎಲ್.ಎಸ್. ಕಾರನ್ನು  ಹೊಂದಿರುವ ದಾಖಲೆ ಲಭ್ಯವಾಗಿದ್ದು, ಇವರ ಮೇಲೆ ಭ್ರಷ್ಟಾಚಾರದಿಂದ ಅಕ್ರಮ ಅಸ್ತಿ ಸಂಪಾದನೆ ಮಾಡಿರುವ ಬಗ್ಗೆ ಪ್ರಕರಣವನ್ನು ದಾಖಲೆ ಮಾಡಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ತಿಳಿಸಿದ್ದಾರೆ.
ಕಾರ್ಯಚಾರಣೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಗುರುರಾಜ, ವಿನಯ, ನರಸಿಂಹರಾಜು, ಹೊನ್ನನೂರು  ಸೇರಿಂದತೆ 15 ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement