ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಕ್ಷರ ಜ್ಞಾನ ನೀಡದೇ ದಲಿತರಿಗೆ ವಂಚನೆ

Vishwanath S
Updated On : 26 May 2013, 2:22 am

ಕ.ಪ್ರ.ವಾರ್ತೆ, ಕಡೂರು, ಮೇ 25
ಪುರೋಹಿತಶಾಹಿ ವ್ಯವಸ್ಥೆಯಿಂದ ಹಿಂದಿನಿಂದಲೂ ಜಾತಿ ಪದ್ಧತಿ ಆಚರಣೆ ಮಾಡುವುದರೊಂದಿಗೆ ದಲಿತರನ್ನು ಶೋಷಿಸಿ ಅಕ್ಷರ ಜ್ಞಾನ ನೀಡದೇ ವಂಚಿಸಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.
 ಅವರು ಕಡೂರು ತಾಲೂಕು ಯಳ್ಳಂಬಳಸೆಯಲ್ಲಿ ದಸಂಸ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, ಅಸ್ಪೃಶ್ಯರಿಗೆ  ಅಕ್ಷರ ಅರಿವು ನೀಡುವುದೊರಂದಿಗೆ ಕ್ರಾಂತಿ ಮಾಡಿದ ಬಸವಣ್ಣ, ಜ್ಯೋತಿ ಬಾಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಮೊದಲಿಗರಾಗಿದ್ದಾರೆ. ಅವರ ಆದರ್ಶಗಳನ್ನು ಮೈಗೊಡಿಸಿಕೊಂಡು ಬಿ.ಕೆ. ಕೃಷ್ಣಪ್ಪ ರಾಜ್ಯದಲ್ಲಿ ದಸಂಸ ಕಟ್ಟಿದ್ದರ ಫಲವಾಗಿ ಹೋರಾಟ ಮಾಡುತ್ತಾ ಇಂದು ರಾಜ್ಯಾದ್ಯಂತ ದಲಿತ ಶಕ್ತಿ  ಶೋಷಿತರ ನೊಂದವರ ದನಿಯಾಗಿದೆ ಎಂದರು.
  ಅಧ್ಯಕ್ಷತೆ ವಹಿಸಿದ್ದ ಶೂದ್ರ ಶ್ರೀನಿವಾಸ್ ಮಾತನಾಡಿ, ದಲಿತ ಸಂಘಟನೆ ರಾಜ್ಯಾದ್ಯಂತ ಜಾಗೃತಿಯ ಅರಿವು ಮೂಡಿಸುತ್ತಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಸಮಾಜದ ಅಸಮಾನತೆ ಸುಧಾರಣೆಗೆ ನಾಂದಿಯಾಗುವುದು ಎಂದರು.
  ಜಿಲ್ಲಾ ಸಮಿತಿ ಸದಸ್ಯ ಪಿ.ಜಿ. ಸಗುನಪ್ಪ, ಸಂಚಾಲಕ ಮೂಡ್ಲಗಿರಿಯಪ್ಪ, ಮೈಸೂರು ಜಿಲ್ಲಾ ನೌಕರರ ಸಂಘದ  ಪದಾಧಿಕಾರಿ ಲೋಕೇಶ್, ರಾಜು, ಮಧು, ಯಳ್ಳಂಬಳಸೆ ಮುಖಂಡ ಓಂಕಾರಪ್ಪ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ವೆಂಕಟೇಶ್, ಆನಂದ್, ದಸಂಸ ಗ್ರಾಮ ಸಂಚಾಲಕ ಹನುಮಂತಪ್ಪ, ಗಿರೀಶ್ ಮೊದಲಾದರು  ಉಪಸ್ಥಿತರಿದ್ದರು. ಗೀತ ಪ್ರಾರ್ಥಿಸಿ  ಸ್ವಾಗತಿಸಿದರು, ತ್ರಿವೇಣಿ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement