ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅನಧಿಕೃತ ತರಗತಿಗೆ ದಾಖಲು ಮಾಡದಿರಿ

Lingaraj Badiger
Updated On : 27 May 2013, 11:00 am

ತರೀಕೆರೆ: ತಾಲೂಕಿನ ಈ ಕೆಳಕಂಡ ಅಧಿಕೃತ ಶಾಲೆಗಳಲ್ಲಿ ಅನಧಿಕೃತ 6 ಮತ್ತು 7ನೇ ತರಗತಿಗಳನ್ನು ನಡೆಸುತ್ತಿದ್ದು, ಈ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋರಿದ್ದಾರೆ.
 ಸಮತ ಕಿರಿಯ ಪ್ರಾಥಮಿಕ ಶಾಲೆ ಭಾವಿಕೆರೆ, ಆದರ್ಶ ಕೇಂಬ್ರಿಡ್ಜ್ ಕಿರಿಯ ಪ್ರಾಥಮಿಕ ಶಾಲೆ ಬಾವಿಕೆರೆ, ಪೂರ್ಣಚಂದ್ರ ಕಿರಿಯ ಪ್ರಾಥಮಿಕ ಶಾಲೆ ಲಕ್ಕವಳ್ಳಿ, ಸಿಲ್ವರ್ ಜ್ಯೂಬಿಲಿ ಕಿರಿಯ ಪ್ರಾಥಮಿಕ ಶಾಲೆ, ಗಾಳಿಹಳ್ಳಿ ಕ್ರಾಸು, ಯುನೈಟೆಡ್ ಕಿರಿಯ ಪ್ರಾಥಮಿಕ ಶಾಲೆ ತರೀಕೆರೆ, ಲಿಟ್ಲಮಿಡ ಸ್ಟಾರ್ ಕಿ.ಪ್ರಾ.ಶಾಲೆ ತರೀಕೆರೆ, ಅಕ್ಷರ ಜನನಿ ಕಿ.ಪ್ರಾ.ಶಾಲೆ ಬುಕ್ಕಾಂಬುದಿ.
ಎಸ್ಸೆಸ್ಸೆಲ್ಸಿ: ಶೇ. 100 ಫಲಿತಾಂಶ
ಬೀರೂರು: ಕಡೂರು ತಾಲೂಕು ನಿಡುವಳ್ಳಿ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ಗ್ರಾಮಾಂತರ ಫ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದೆ 35 ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ 525 ಅಂಕ ಪಡೆದು ಎನ್.ಸಿ ರಮ್ಯ ತೇರ್ಗಡೆ ಹೊಂದಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದ್ಘಾಟನೆ
ತರೀಕೆರೆ ಶ್ರೀ ಬನಶಂಕರಿ ಪತ್ತಿನ ಸಹಕಾರ ಸಂಘದ ಕಚೇರಿಯ ನೂತನ ಕಟ್ಟಡ ಮತ್ತು ವಾಣಿಜ್ಯ ಮಳಿಗೆಯ ಉದ್ಘಾಟನೆಯನ್ನು ಹಂಪೆ ಹೇಮಕೂಟ ಗಾಯಿತ್ರಿ ಪೀಠ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ನೆರವೇರಿಸಿದರು. ಶಾಸಕ ಜಿ.ಎಚ್. ಶ್ರೀನಿವಾಸ್, ಬಿ.ಎಸ್. ನಾಗರಾಜ್, ಬಿ.ಎಸ್.ಆರ್. ಮಂಜುನಾಥ್, ಶಿವಕುಮಾರ್, ಟಿ.ಆರ್. ಶ್ರೀಧರ್ ಇದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಗಾಜನೂರಿನ ತುಂಗಾ ವಿದ್ಯಾಪೀಠವು ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ಜೂನ್ 10ರಿಂದ ನವೆಂಬರ್ 9ರವರೆಗೆ 5 ತಿಂಗಳ ಅವಧಿಯ ವಸತಿರಹಿತ ಡ್ರೆಸ್ ಮೇಕಿಂಗ್ ತರಬೇತಿ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು 18ರಿಂದ 30 ವರ್ಷ ವಯೋವುತಿಯೊಳಗಿನವರಾಗಿರಬೇಕು. ನವಸಾಕ್ಷರರು ಮತ್ತು ಓದು- ಬರಹ ಬಲ್ಲವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ವರ್ಗದವರಿಗೆ ಆಯ್ಕೆಯಲ್ಲಿ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 500 ವೇತನ ನೀಡಲಾಗುವುದು. ಅಭ್ಯರ್ಥಿಠೇವಣಿ ಹಣ 50ಗಳನ್ನು ಕಚೇರಿಗೆ ಪಾವತಿಸಬೇಕು. ತರಬೇತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜೂನ್ 2ರಂದು ಬೆಳಿಗ್ಗೆ 11ಗಂಟೆಯಿಂದ ತುಂಗಾವಿದ್ಯಾಪೀಠದಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement