ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗ್ರಾಮ ಸಹಾಯಕರ ಖಾಯಂಗೊಳಿಸಲು ಪ್ರಯತ್ನ

Lingaraj Badiger
Updated On : 27 May 2013, 10:52 am

ಕಡೂರು ಮೇ 26:
ಯಾವುದೇ ಘಟನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸುವ ರಾಜ್ಯದ ಸಾವಿರಾರು ಗ್ರಾಮ ಸಹಾಯಕರ ಖಾಯಂ ನೇಮಕಾತಿಗಾಗಿ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯುವ ಜೊತೆ ಬೇಡಿಕೆ ಈಡೇರಿಕೆಗೆ ಸಹಾಯಕರೊಂದಿಗೆ ಮುಷ್ಕರ ನಡೆಸಲು ಸಿದ್ದನಾಗಿದ್ದೇನೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
 ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಹಾಯಕರ ರಾಜ್ಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಿನಗೂಲಿ ನೌಕರರ ಅಳಲು ಅವರ ಜೀವನ ನಿರ್ವಹಣೆ ಕೂಡ ಸಂಕಷ್ಟದಲ್ಲಿರುವುದು ನನಗೆ ಅರಿವಿದೆ. ನಮ್ಮಂತಹ ರಾಜಕಾರಣಿಗಳ ಅಗ್ಗದ ಜನಪ್ರಿಯತೆಗಾಗಿ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಲೇ ದಿನಗೂಲಿ ನೌಕರರ ಮೂಗಿಗೆ ತುಪ್ಪ ಸವರಿ ದಿನದೂಡುತ್ತಾ ಬರಲು ರಾಜಕಾರಣಿಗಳು ಕಾರಣರಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಯಾವುದೂ ಅಸಾಧ್ಯವಲ್ಲ: 1978 ರಲ್ಲಿ ಗ್ರಾಮ ಸಹಾಯಕರ ಹುದ್ದೆ ಸೃಷ್ಟಿಯಾಗಿದ್ದು, ಆದರೆ, ಸರ್ಕಾರಗಳು ಪ್ರಥಮ ವರದಿ ನೀಡುವ ಗ್ರಾಮ ಸಹಾಯಕರನ್ನು ಖಾಯಂ ಮಾಡದೇ ಮನೆಗೂ ಕೂಡ ಕಳುಹಿಸಿದೆ ದುಡಿಸಿಕೊಳ್ಳುತ್ತಿವೆ. ಜನರ ಸಮಸ್ಯೆಗೆ ಸ್ಪಂದಿಸುವಂತಹ ಸರ್ಕಾರಗಳು ಇದ್ದಲಿ ಯಾವುದೂ ಅಸಾಧ್ಯವಲ್ಲ. ನಮ್ಮ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ದಿನಗೂಲಿ ನೌಕರರು ಬೆಂಗಳೂರಿನಲ್ಲಿ ಅನಿರ್ಧಿಷ್ಟ ಮುಷ್ಕರ ಕೈಗೊಂಡಾಗ ನಾನು ನಮ್ಮ ಸರ್ಕಾರ ಕೈಗೊಂಡ ದಿಟ್ಟ ಕ್ರಮದಿಂದಾಗಿ ಇಂದು ದಿನಗೂಲಿ ನೌಕರರು ಸಂತೋಷಗೊಂಡಿದ್ದಾರೆ ಎಂದರು.
ಪ್ರಾಮಾಣಿಕ ಪ್ರಯತ್ನ: ನನ್ನ 35 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅಧಿಕಾರದಲ್ಲಿ ಇರಲಿ ಬಿಡಲಿ ಯಾವುದೇ ಭರವಸೆಗಳನ್ನು ಇಟ್ಟುಕೊಂಡು ಕೆಲಸ ಮಾಡದೆ ಹೋರಾಟ ಮಾಡಿಕೊಂಡೇ ಬಂದಿದ್ದೇನೆ.
ಹೃದಯವಂತಿಕೆ ಇದ್ದರೆ ಒಂದು ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಅವರ ಮನವೊಲಿಸಿ ರಾಜ್ಯದ 10,450 ಗ್ರಾಮ ಸಹಾಯಕರ ಖಾಯಮಾತಿಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಹೋರಾಟಕ್ಕೆ ಸಿದ್ಧ: ಕೆ.ಎ.ಟಿ.ಯಲ್ಲಿ ನಿಮ್ಮ ಪರವಾಗಿ ಬಂದಿರುವ ತೀರ್ಪನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ನೌಕರರನ್ನು ಖಾಯಂಗೊಳಿಸುವಂತೆ ಸರ್ಕಾರದ ಬಳಿ ನಿಯೋಗ ಹೋಗೋಣ.
   ಮುಖ್ಯಮಂತ್ರಿಗಳ ಮನವೊಲಿಸಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸೋಣ. ಅದಕ್ಕೂ ಸಾಧ್ಯವಾಗದಿದ್ದರೆ ನಿಮ್ಮ ಜೊತೆ ನಾನೂ ಕೂಡ ಮುಷ್ಕರದಲ್ಲಿ ಪಾಲ್ಗೊಂಡು ಹೋರಾಟ ಮಾಡುತ್ತೇನೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.
   ಗ್ರಾಮ ಸಹಾಯಕರಲ್ಲಿ ದಲಿತ ಸಮುದಾಯದವರೇ ಹೆಚ್ಚಾಗಿರುವ ಕಾರಣ ಕಂದಾಯ ಸಚಿವರಾದ ಶ್ರೀನಿವಾಸ್ ಪ್ರಸಾದ್ ಮತ್ತು ಹಿಂದುಳಿದವರ ಪರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡುವ ಮೂಲಕ ನಿಮ್ಮ ಬೇಡಿಕೆಗಳು ಈಡೇರುವ ಸಾಧ್ಯತೆ ಇದೆ ಎಂದು ಹೇಳಿದರು.
  ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಯುವ ಕಾರ್ಯದರ್ಶಿ ಮಂಜುನಾಥ ಪ್ರಸನ್ನ,ಮುಖಂಡ ಡಿ. ಪ್ರಶಾಂತ್,ಸಂಘದ ರಾಜ್ಯಾಧ್ಯಕ್ಷ ಪ್ರಕಾಶ್, ತಾಲೂಕು ಕಾರ್ಯದರ್ಶಿ ಕೆ. ಲೋಕೇಶ್, ದೇವರಾಜ್, ನಂದೀಶ್, ತಮ್ಮಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಶಿವಾನಂದಪುರಿ ಶ್ರೀ ಪಾದಪೂಜೆ
ಕ.ಪ್ರ.ವಾರ್ತ್ಣೆಕಡೂರ್ಣು ಮೇ 26
ಕಡೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ವೈ.ಎಸ್.ವಿ. ದತ್ತ ಅವರು ಕಾಗಿನೆಲೆ ಗುರುಪೀಠದ ಕೆ.ಆರ್.ನಗರದ ಕಾಗಿನೆಲೆ ಶಾಖಾ ಮಠದ ಗುರುಗಳಾದ ಶ್ರೀ ಶಿವಾನಂದಪುರಿ ಸ್ವಾಮೀಜಿಯವರನ್ನು ಯಗಟಿಗೆ ಬರಮಾಡಿಕೊಂಡು ಪಾದಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಲ್ಲಿಸಿದರು.                                                                
 ಶಾಸಕರಾದ ಬಳಿಕ ಮೊದಲ ಭಾರಿಗೆ ತಮ್ಮ ಸ್ವಗ್ರಾಮವಾದ ಯಗಟಿ ಗ್ರಾಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮತ್ತು ಯಗಟಿಯ 9 ದೊಡ್ಡಿಯ ಗುಡಿ ಗೌಡರು ಹಾಗು ಎಲ್ಲ ಗ್ರಾಮಸ್ಥರೊಂದಿಗೆ ಶ್ರೀ ಶಿವಾನಂದಪುರಿ ಸ್ವಾಮೀಜಿಗಳನ್ನು ಡೊಳ್ಳುಸೇವೆ ಮತ್ತು ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಬರಮಾಡಿಕೊಂಡು ದತ್ತರವರ ನೇತೃತ್ವದಲ್ಲಿ ರಾಜಬೀದಿಗಳಲ್ಲಿ ಮೆರವಣೆಗೆ ನಡೆಸಲಾಯಿತು.
ಪಾದಪೂಜೆ: ನಂತರ ದತ್ತರವರ ಮನೆಯ ಪ್ರವೇಶ ಮಾಡಿದ ಶ್ರೀ ಸ್ವಾಮೀಜಿಗಳನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಆನಂತರ ತಮ್ಮ ಪತ್ನಿ ನಿರ್ಮಲಾ ದತ್ತರವರೊಂದಿಗೆ ಶ್ರೀಗಳ ಕಾಲು ತೊಳೆದು ತಮ್ಮ ಕುಟುಂಬ ಪರಿವಾರ ಸಮೇತರಾಗಿ ಮತ್ತು ಬ್ರಾಹ್ಮಣ ಪುರೋಹಿತರಿಂದ ಬ್ರಾಹ್ಮಣ ಶೈಲಿಯಲ್ಲಿ ಶ್ರೀಗಳಿಗೆ ಪಾದ ಪೂಜೆಯನ್ನು ಸಲ್ಲಿಸಿದರು. ನಂತರ ಫಲ ಸಂಪ್ರದಾಯದಂತೆ ಶಾಲು ಹೊದಿಸಿ ಪುಷ್ಪಗಳನ್ನು ಶ್ರೀಗಳಿಗೆ ಅರ್ಪಿಸಿ ಶ್ರೀಯವರಿಂದ ಆಶೀರ್ವಾದ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement