ಚಂದ್ರಪ್ಪಗೆ ಸಚಿವ ಸ್ಥಾನ ನೀಡಲು ದಸಂಸ ಆಗ್ರಹ
ಕ.ಪ್ರ.ವಾರ್ತೆ, ಕಡೂರು, ಮೇ 26 ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದ ಮೂಡಿಗೆರೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪನವರಿಗೆ ಎಂ.ಎಲ್.ಸಿ. ಅಥವಾ ಸಚಿವಗಿರಿ ನೀಡುವಂತೆ ದಸಂಸ ಜಿಲ್ಲಾ ವಿಭಾಗೀಯ ಸಂಚಾಲಕ ಮಂಜಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡೀರುವ ಅವರು, ಕಳೆದ 30 ವರ್ಷದಿಂದ ಕಾಂಗ್ರೆಸ್ ಕಟ್ಟಾಳಿನಂತೆ ದುಡಿಯುತ್ತಿರುವ ಚಂದ್ರಪ್ಪನವರಿಗೆ ಈ ಬಾರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಆದರೆ ಕೇವಲ 635 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಕೆಲ ಸ್ವಾರ್ಥ ರಾಜಕಾರಣಿಗಳು ಅವರ ಸೋಲಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಸಜ್ಜನ ರಾಜಕಾರಣಿಯಾಗಿರುವ ಬಿ.ಎನ್. ಚಂದ್ರಪ್ಪನವರು ಎಲ್ಲ ವರ್ಗದ ಪ್ರೀತಿಗೆ ಪಾತ್ರರಾಗದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸೇವೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಚಂದ್ರಪ್ಪನವರ ಸೇವೆ ಗುರುತಿಸಿ ಸಚಿವಗಿರಿ ಅಥವಾ ಎಂ. ಎಲ್.ಸಿ. ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
--