ಜೂನ್ 3ನೇ ವಾರ ಟೆಲಿಕಾಂ ಅದಾಲತ್
ಚಿಕ್ಕಮಗಳೂರು: ಭಾರತ ಸಂಚಾರ ನಿಗಮ ನಿಯಮಿತ ವತಿಯಿಂದ 2013 ರ ಜೂನ್ ಮಾಹೆಯ ಮೂರನೇ ವಾರದಲ್ಲಿ ಟೆಲಿಕಾಂ ಅದಾಲತ್ ಆಯೋಜಿಸಲಾಗಿದೆ. ಗ್ರಾಹಕರು ತಮ್ಮ ಫಿರ್ಯಾದುಗಳನ್ನು ಜೂನ್ 11 ರೊಳಗೆ ಟೆಲಿಕಾಂ ಅದಾಲತ್‌ಗೆ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ, ಜಿಲ್ಲಾ ಮಹಾ ಪ್ರಭಂದಕರ ಕಚೇರಿ, ಬಿ.ಎಸ್.ಎನ್.ಎಲ್. ಬೆಲ್ಟ್ ರಸ್ತೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅವಧಿ ವಿಸ್ತರಣೆ
ಚಿಕ್ಕಮಗಳೂರು ಮೇ 27, 2013 -14ನೇ ಸಾಲಿನ ನಗರದ ಡಿಸಿಎಜಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಥಮ ಡಿಪ್ಲೊಮೋ ಪ್ರವೇಶಕ್ಕೆ ಸಂಬಂಧಿಸಿದ ಪ್ರವೇಶ ಅರ್ಜಿಗಳ ವಿತರಣೆ ಮತ್ತು ಸ್ವೀಕರಿಸುವ ಅವಧಿಯನ್ನು ಜೂನ್ 1 ರ ಸಂಜೆ 5 ಗಂಟೆವರೆಗೆ ವಿಸ್ತರಿಸಲಾಗಿದೆ. ಮಾಹಿತಿಗಾಗಿ ಪ್ರಾಚಾರ್ಯರು ಡಿಸಿಎಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕಮಗಳೂರು, ದೂರವಾಣಿ ಸಂಖ್ಯೆ 08262-222411ಗೆ ಸಂಪರ್ಕಿಸುವಂತೆ ಕೋರಲಾಗಿದೆ.