ಸಾಲ ಬಾಧೆ ತಾಳದೆ ರೈತ ಆತ್ಮಹತ್ಯೆ
ಚಿಂಚೋಳಿ: ಸಾಲದ ಬಾಧೆ ತಾಳದೆ ಮೈಮೇಲೆ ಸೀಮೆಎಣ್ಣೆ ಸುರಿದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶರಣಯ್ಯ ತಂದೆ ಷಣ್ಮಿಖಯ್ಯ(55) ಅಸುನೀಗಿದ ರೈತ. ಮೃತನು ಸಾಲದ ಬಾಧೆಯಿಂದಾಗಿ ಕುಡಿದ ಅಮಲಿನಲ್ಲಿಯೇ ಶನಿವಾರ ತನ್ನ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಸಿಪಿಐ ಎಂ. ವರದರಾಜು ತಿಳಿಸಿದ್ದಾರೆ.