'ಕನ್ನಡ ಪರ ಜಾಗೃತಿ ಮೂಡಿಸಿ'
ಚಿಕ್ಕಮಗಳೂರು: ಹೆಚ್ಚು ಕ್ರಿಯಾಶೀಲರನ್ನಾಗಿ ಪರಿಷತ್ತಿನ ಕನ್ನಡ ಪರ ಚಟುವಟಿಕೆಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಹೇಳಿದರು. ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಸಬಾ ಹೋಬಳಿಗೆ ನೂತನವಾಗಿ ಆಯ್ಕೆಯಾದ ದೀಪಕ್ ದೊಡ್ಡಯ್ಯ ಮತ್ತು ಲಕ್ಯಾ ಹೋಬಳಿ ಅಧ್ಯಕ್ಷ ಶಶಿಧರ್ ಅವರನ್ನು ಗೌರವಿಸಿ ಕನ್ನಡ ಕೆಲಸಕ್ಕೆ ಯಾರೂ ಕೂಡ ಎಂದೂ ನಿರ್ಲಕ್ಷ್ಯ ತೋರಬಾರದು ಎಂದು ಹೇಳಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ನಟರಾಜ್ ಮಾತನಾಡಿ, ಎಲ್ಲಾ ಹೋಬಳಿ ಮಟ್ಟದಲ್ಲಿ ಕನ್ನಡ ಭವನ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಆಲ್ದೂರು ಹೋಬಳಿ ಅಧ್ಯಕ್ಷ ಸಿ.ಎಸ್. ಭೋಜೇಗೌಡ ಪ್ರಾರ್ಥಿಸಿದರು. ನೂರ್ ಅಹಮದ್ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ವಂದಿಸಿದರು.
ಇಂದು ಉಚಿತ ಸಾಮೂಹಿಕ ವಿವಾಹ
ಶೃಂಗೇರಿ: ಶಾರದಾ ಪೀಠ, ವಿವಿಧ ಸಂಘಟನೆಗಳು ಹಾಗೂ ಭಾರತ್ ವಿದ್ಯಾ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಮೇ 29ರ ಬುಧವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಮಠದ ಆಡಳೀತಾಧಿಕಾರಿ ವಿ.ಆರ್. ಗೌರೀಶಂಕರ ಮಾಂಗಲ್ಯ ವಿತರಣೆ ಮಾಡಲಿದ್ದು. ಎ.ಎಸ್.ನಯನ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಹಸೀಲ್ದಾರ್ ದೇವಮ್ಮ, ಕೋವಾರೇವಣ್ಣ, ಟಿ.ಕೆ. ವಿಶ್ವಜಿತ್, ಬಿ. ಶಿವಶಂಕರ್, ಮಾವಿನಕಾಡು ರಂಗನಾಥ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
--