ಜಮ್ಮಟಿಗೆ: ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ
ಕ.ಪ್ರ.ವಾರ್ತೆ, ಕೊಪ್ಪ, ಮೇ 29
ತಾಲೂಕಿನ ಹರಿಹರಪುರದ ಜಮ್ಮಟಿಗೆ ಅಗ್ರಹಾರದಲ್ಲಿನ ನೂರಾರು ವರ್ಷ ಹಳೆಯದಾದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮೇ 29ರಿಂದ 31ರವರೆಗೆ ಹಮ್ಮಿಕೊಳ್ಳಲಾಗಿರುವ ಸ್ವಾಮಿಯ ಜೀರ್ಣೋದ್ಧಾರ ಮತ್ತು ಪುನರಷ್ಟಬಂಧ ಪ್ರತಿಷ್ಠಾಪನೆಗೆ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಚಾಲನೆ ದೊರೆಯಿತು.
ಬುಧವಾರ ಬೆಳಗ್ಗೆ ಗುರು-ಗಣೇಶಪೂಜೆ, ಪುಣ್ಯಾಹ, ನಾಂದಿ, ಅನುಗ್ರಹ ಪ್ರಾರ್ಥನೆ, ವಾಸ್ತು-ರಾಕ್ಷೋಘ್ನ ಹೋಮ, ವಾಸ್ತುಪೂಜಾ- ಬಲಿ , ನಪುಂಸಕ ಶಿಲಾಧಿವಾಸಹೋಮ, ರತ್ನನ್ಯಾಸ ಹೋಮ, ಪೀಠಾಧಿವಾಸ ಹೋಮ ನಡೆದವು.
ಮೇ 30 ಗುರುವಾರದಂದು ಬೆಳಗ್ಗೆ ರತ್ನನ್ಯಾಸಪೂರ್ವಕ ದೇವರ ಪ್ರತಿಷ್ಠೆ ಅಷ್ಟಬಂಧ ಸಂಯೋಜನೆ, ಕಲಾತತ್ವ ಹೋಮ, ಕಲಾತತ್ವ ಕಲಶಾಭಿಷೇಕ ಪೂಜೆ ನಡೆಯಲಿದ್ದು, ಸಂಜೆ 108 ಬ್ರಹ್ಮಕುಂಭ ಪ್ರತಿಷ್ಠೆ, ಅಧಿವಾಸಹೋಮ ನಡೆಯಲಿದೆ.
ಮೇ 31ಶುಕ್ರವಾರದಂದು ಶಾಂತಿಹೋಮ, ಪ್ರಾಯಶ್ಚಿತಹೋಮ,108 ಬ್ರಹ್ಮಕುಂಭಾಭಿಷೇಕ ಮಹಾಪೂಜೆ, ಮಹಾಮಂಗಳಾರತಿ, ಮಂತ್ರಾಕ್ಷತೆ ಅನ್ನಸಂತರ್ಪಣೆ ಸಮಾರಂಭಗಳು ನಡೆಯಲಿವೆ.