ನವ ಜೀವನಕ್ಕೆ ಕಾಲಿಟ್ಟ 10 ಜೋಡಿ
ಕನ್ನಡಪ್ರಭ ವಾರ್ತೆ, ಶೃಂಗೇರಿ, ಮೇ 29
ಇಲ್ಲಿನ ಭಾರತ್ ವಿಕಾಸ್ ಪರಿಷತ್, ಶ್ರೀ ಶಾರದಾ ಪೀಠ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 10 ಜೋಡಿಗಳು ಹಸೆಮಣೆ ಏರಿದರು.
ಶ್ರೀ ಮಠದ ಅಧಿಕಾರಿ ಶ್ರೀಪಾದರಾವ್, ಎ.ಎಸ್. ನಯನ, ಪಪಂ ಮಾಜಿ ಅಧ್ಯಕ್ಷ ಪರಾಶರ, ಸತ್ಯನಾರಾಯಣ, ತಹಸೀಲ್ದಾರ್ ದೇವಮ್ಮ ಸೇರಿದಂತೆ ಮುಖ್ಯ ಅತಿಥಿಗಳು ನವ ವಧುವರರಿಗೆ ಹಾರೈಸಿದರು.
ನಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಜಿಪಂ ಮಾಜಿ ಅಧ್ಯಕ್ಷ ಮಾವಿನಕಾಡು ರಂಗನಾಥ್, ಬೆಂಗಳೂರಿನ ವಕೀಲ ಟಿ.ಕೆ. ವಿಶ್ವನಾಥ್, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಶಿವಶಂಕರ್,. ಸುಬ್ರಮಣ್ಯ ಇತರರು ಇದ್ದರು.